ಭಾರತ, ಮಾರ್ಚ್ 14 -- ಎಮರ್ಜೆನ್ಸಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ: ಬಾಲಿವುಡ್‌ನ ಎಮರ್ಜೆನ್ಸಿ ಸಿನಿಮಾ ಕೊನೆಗೂ ನೆಟ್‌ಫ್ಲಿಕ್ಸ್‌ಗೆ ಆಗಮಿಸಿದೆ. ಕಂಗನಾ ರಣಾವತ್‌ ನಿರ್ದೇಶನ ಮತ್ತು ನಟನೆಯ ಈ ಸಿನಿಮಾ ಹೋಳಿ ಹಬ್ಬದ ಸಮಯದಲ್ಲಿ ಒಟಿಟಿಗೆ ಆಗಮಿಸಿದೆ. ಈ ಸಿನಿಮಾದಲ್ಲಿ ಕಂಗನಾ ರಣಾವತ್‌ ಅವರು ತುರ್ತು ಪರಿಸ್ಥಿತಿ ಕಾಲದ ಪ್ರಧಾನಮಂತ್ರಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಮಾರ್ಚ್‌ 14ರಂದು ಬಿಡುಗಡೆಯಾಗಲಿದೆ ಎಂದು ಕಂಗನಾ ರಣಾವತ್‌ ತಿಳಿಸಿದ್ದರು. ಇದೀಗ ಈ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

"ನಾನು ಮಣಿಕರ್ಣಿಕಾದ ಬಳಿ ನಿರ್ದೇಶನ ಮಾಡಿರುವ ಎರಡನೇ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಿ" ಎಂದು ಕಂಗನಾ ರಣಾವತ್‌ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಎಮರ್ಜೆನ್ಸಿ ಸಿನಿಮಾವು ಈ ಹಿಂದೆಯೇ ಒಟಿಟಿಯಲ್ಲಿ ಬಿಡುಗಡೆಯಾಗಬೇಕಿತ್ತು. ಈ ಸಿನಿಮಾ ಮಾರ್ಚ್‌ 17ರಂದು ಆಗಮಿಸುವ ನಿರೀಕ್ಷೆಯಿತ್ತು. ಆದರೆ, ಅದನ್ನು ರಿಶೆಡ್ಯೂಲ್‌ ಮಾಡಲಾಗಿತ್ತು. ಇದೀಗ ಮಾರ್ಚ್‌ 14ರಂ...