ಭಾರತ, ಮಾರ್ಚ್ 8 -- ಬೃಹತ್ ಗಾತ್ರದ ಆನೆ ಕಂಡರೆ ಏನೋ ಒಂದು ಅಕ್ಕರೆ. ಆಕರ್ಷಣೆಯೂ ಹೌದು. ಬಹಳ ಬುದ್ಧಿವಂತ ಪ್ರಾಣಿ ಎಂದೇ ಗುರುತಿಸಿಕೊಂಡಿರುವ ಆನೆ ಅನೇಕ ವಿಷಯಗಳಿಗೆ ಗಮನಸೆಳೆಯುತ್ತದೆ. ಅದರ ಬದುಕು, ಚಟುವಟಿಕೆಗಳು ಹಾಗೂ ಮಾದರಿಯಾಗಬಲ್ಲ ನಡೆಗಳು ಅಧ್ಯಯನಕ್ಕೆ ಸೂಕ್ತವಾದ ವಿಚಾರವೂ ಹೌದು.

ಆನೆಗಳ ಪೈಕಿ ಮೂರು ಜಾತಿಯ ಆನೆಗಳಿವೆ: ಆಫ್ರಿಕನ್ ಸವನ್ನಾ (ಬುಷ್), ಆಫ್ರಿಕನ್ ಅರಣ್ಯ ಮತ್ತು ಏಷ್ಯನ್ ಎಂದು ವರ್ಗೀಕರಿಸಲಾಗುತ್ತದೆ. ಆಫ್ರಿಕನ್ ಆನೆಗಳ ಕಿವಿಗಳು ತಮ್ಮ ಸೋದರ ಸಂಬಂಧಿಗಳಿಗಿಂತ ದೊಡ್ಡದಾಗಿದೆ ಮತ್ತು ಆಫ್ರಿಕನ್ ಖಂಡದ ಆಕಾರದಲ್ಲಿದೆ ಎಂದು ವಿವರಿಸಲಾಗುತ್ತದೆ. ಆದರೆ ಏಷ್ಯನ್ ಆನೆಗಳ ಕಿವಿಗಳು ಭಾರತೀಯ ಉಪಖಂಡದ ಆಕಾರದಲ್ಲಿವೆ ಎಂಬುದು ಕುತೂಹಲಕಾರಿ ವಿವರಣೆ.

ಭಾರತದಲ್ಲಿ ಕಂಡು ಬರುವ ಆನೆಗಳು ಏಷ್ಯಾ ಮೇನ್‌ಲ್ಯಾಂಡ್‌ನ ಜಾತಿಗೆ ಸೇರಿದವು. ಏಷ್ಯಾದ ನಾಲ್ಕನೇ ಮೂರಂಶ ಆನೆಗಳು ಭಾರತದಲ್ಲಿವೆ ಎಂದು ಹೇಳಲಾಗುತ್ತದೆ.

ಆನೆಗಳನ್ನು ನೋಡಿ ಮಕ್ಕಳ ಪಾಲನೆ ಕಲಿಯಬೇಕು ಎಂದು ಆನೆಗಳ ಬದುಕು ಬಲ್ಲವರು ಹೇಳುತ್ತಾರೆ. ಹಾಗಾಗಿ, ಆನೆಗಳ ಪ...