ಭಾರತ, ಮಾರ್ಚ್ 17 -- Ekka maar song lyrics: ಯುವ ಸಿನಿಮಾದ ಬಳಿಕ ಯುವ ರಾಜ್‌ಕುಮಾರ್‌ ನಟನೆಯ ಎಕ್ಕ ಸಿನಿಮಾ ರೆಡಿಯಾಗುತ್ತಿದೆ. ಅಭಿಮಾನಿಗಳಿಗೆ ಸಿನಿಮಾದ ಹುಚ್ಚೆಬ್ಬಿಸಲು ಇಂದು ಪುನೀತ್‌ ರಾಜ್‌ಕುಮಾರ್‌ 50ನೇ ಹುಟ್ಟುಹಬ್ಬದ ಸ್ಮರಣೆ ಪ್ರಯುಕ್ತ ಎಕ್ಕ ಸಿನಿಮಾದ ಎಕ್ಕಾ ಮಾರ್‌ ಹಾಡು ಬಿಡುಗಡೆ ಮಾಡಲಾಗಿದೆ. ನಾಗಾರ್ಜುನ್‌ ಶರ್ಮಾ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಚರಣ್ ರಾಜ್‌, ರೋಹಿತ್‌ ಪದಕಿ ಮತ್ತು ಮಹಾಲಿಂಗಮ್‌ ಧ್ವನಿಯಲ್ಲಿ ಈ ಹಾಡು ಸಖತ್‌ ಆಗಿ ಮೂಡಿ ಬಂದಿದೆ. ಈ ಹಾಡಿನ ಕನ್ನಡ ಲಿರಿಕ್ಸ್‌ ಇಲ್ಲಿ ನೀಡಲಾಗಿದೆ. ಅಂದಹಾಗೆ, ಎಕ್ಕ ಸಿನಿಮಾವು ಜೂನ್‌ 6ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಾಯಕಿಯರಾಗಿ ಸಂಪದ, ಸಂಜನಾ ಆನಂದ್‌ ನಟಿಸುತ್ತಿದ್ದಾರೆ.

ಇಸ್ಪಿಟ್‌ ಆಟದಲ್ಲಿ ಬಳಸುವ ಕೆಲವೊಂದು ಪದಗಳನ್ನು ಈ ಹಾಡಿನಲ್ಲಿ ಜೋಡಿಸಿದ್ದು ವಿಶೇಷ. ಹೀಗಾಗಿ, ಈ ಆಟ ಬಲ್ಲವರಿಗೆ ಈ ಹಾಡು ಸಖತ್‌ ಕಿಕ್‌ ನೀಡಬಹುದು. "ಓಸಿ ನೂಕು ಓಸಿ ನೂಕು ಓಸಿ ನೂಕು ಎಲೆನಾ ಅಲ್ಲಿ ರಾಜ ಇಲ್ಲಿ ರಾಣಿ ಬಿಟ್ಟು ತೋರ್ಸು ಕಳೆ ...