Bengaluru, ಮಾರ್ಚ್ 17 -- Ekka First Single: ದೊಡ್ಮನೆ ಕುಡಿ, ರಾಜ್‌ಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಕಿರಿ ಮಗ ಯುವ ರಾಜ್‌ಕುಮಾರ್‌ ನಟನೆಯ ಎರಡನೇ ಸಿನಿಮಾ ಎಕ್ಕ. ಕಳೆದ ವರ್ಷದ ವಿಜಯದಶಮಿಗೆ ಘೋಷಣೆ ಆಗಿದ್ದ ಈ ಸಿನಿಮಾ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶೀರ್ಷಿಕೆ ಅನಾವರಣ ಮಾಡಿಕೊಂಡಿತು. ಅದಾದ ಮೇಲೆ ನವೆಂಬರ್‌ 28ರಂದು ಅದ್ಧೂರಿಯಾಗಿ ಮುಹೂರ್ತ ಮುಗಿಸಿಕೊಂಡು, ಶೂಟಿಂಗ್‌ಗೆ ಚಾಲನೆ ನೀಡಿತ್ತು. ಇದೀಗ ಇದೇ ಸಿನಿಮಾ ಇಂದು (ಮಾ. 17) ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಬರ್ತ್‌ಡೇ ಪ್ರಯುಕ್ತ ಹಾಡಿನ ಮೂಲಕ ಆಗಮಿಸಿದೆ.

ಎಕ್ಕ ಸಿನಿಮಾ ಶೀರ್ಷಿಕೆಯ ಮೂಲಕವೇ ಸಖತ್‌ ಸೌಂಡ್‌ ಮಾಡುತ್ತಿದೆ. ಇದೀಗ ಇದೇ ಸಿನಿಮಾ "ಎಕ್ಕಾ ಮಾರ್‌ ಉನ್ನಿಸ್‌ ಕಟ್ ಛಬ್ಬೀಸ್‌ ಕಟ್.." ಹಾಡು ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಆಗಿದೆ. ನಾಗಾರ್ಜುನ್‌ ಶರ್ಮಾ ಈ ಹಾಡಿಗೆ ಸಾಹಿತ್ಯ ಬರೆದರೆ, ಚರಣ್ ರಾಜ್‌, ರೋಹಿತ್‌ ಪದಕಿ ಮತ್ತು ಮಹಾಲಿಂಗಮ್‌ ಧ್ವನಿ ನೀಡಿದ್ದಾರೆ. ಪಕ್ಕಾ ಲೋಕಲ್‌ ಬಾಯ್‌ ಅವತಾರದಲ್ಲಿ ಯುವ ...