Bengaluru, ಫೆಬ್ರವರಿ 18 -- ಹಿಂದೂ ಪಂಚಾಂಗದಲ್ಲಿ ಪ್ರತಿ ತಿಂಗಳು ಎರಡು ಏಕಾದಶಿಗಳು ಬರುತ್ತವೆ. ಶುಕ್ಲ ಪಕ್ಷದಲ್ಲಿ ಒಂದು ಮತ್ತು ಕೃಷ್ಣ ಪಕ್ಷದಲ್ಲಿ ಒಂದು ಏಕಾದಶಿ ಬರುವುದರಿಂದ ವರ್ಷದಲ್ಲಿ ಒಟ್ಟು 24 ಏಕಾದಶಿಗಳನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಏಕಾದಶಿಗೆ ಬಹಳ ಮಹತ್ವವನ್ನು ನೀಡಲಾಗಿದೆ. ಇದನ್ನು ಬಹಳ ಪವಿತ್ರ ಹಾಗೂ ಶುಭ ಎಂದು ನಂಬಲಾಗಿದೆ. ಏಕಾದಶಿಯ ವ್ರತವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಏಕಾದಶಿಗಳಲ್ಲಿ ಫಾಲ್ಗುಣ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿ ಬಹಳ ವಿಶೇಷವಾಗಿದೆ. ಅದನ್ನು ಅಮಲಕಿ ಏಕಾದಶಿ ಎಂದು ಕರೆಯುತ್ತಾರೆ. ಈ ಏಕಾದಶಿಯನ್ನು ಭಾರತದ ಕೆಲವಡೆ ಆಮ್ಲಾ ಏಕಾದಶಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈ ಶುಭದಿನದಂದು ಭಗವಾನ್‌ ವಿಷ್ಣುವನ್ನು ಆರಾಧಿಸುವ ಜೊತೆಗೆ ಆಮ್ಲಾ ಅಂದರೆ ನೆಲ್ಲಿಕಾಯಿಯ ಗಿಡವನ್ನು ಸಹ ಪೂಜಿಸಲಾಗುತ್ತದೆ. ಈ ದಿನ ವ್ರತಾಚರಣೆಯೂ ವಿಶೇಷವಾಗಿದೆ. ಈ ವರ್ಷದ ಫಾಲ್ಗುಣ ಮಾಸದ ಅಮಲಕಿ ಏಕಾದಶಿ ಯಾವಾಗ? ಶುಭ ಮುಹೂರ್ತ ಮತ್ತು ಪೂಜಾವಿಧಿಗಳೇನು ಎಂದು ತಿಳಿಯೋಣ.

ಹಿ...