Bangalore, ಫೆಬ್ರವರಿ 15 -- Education News: ಆರ್ಥಿಕ ಲೆಕ್ಕಾಚಾರ, ಶೈಕ್ಷಣಿಕ ಮಹತ್ವ ಹಾಗೂ ಆಡಳಿತಾತ್ಮಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮೂರು ವರ್ಷದ ಹಿಂದೆ ಕರ್ನಾಟಕದ ನಾನಾ ಜಿಲ್ಲೆಗಳಲ್ಲ ಆರಂಭಿಸಿದ್ದ ಹತ್ತು ವಿಶ್ವವಿದ್ಯಾನಿಲಯಗಳಲ್ಲಿ ಒಂಬತ್ತು ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ಕರ್ನಾಟಕ ಸರ್ಕಾರ ಯೋಚಿಸುತ್ತಿದೆ. ಹಿಂದೆ ಇದ್ದ ವಿಶ್ವವಿದ್ಯಾನಿಲಯಗಳನ್ನು ವಿಭಜಿಸಿ ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಎನ್ನುವ ಪರಿಕಲ್ಪನೆಯಡಿ ಹಿಂದಿನ ಬಿಜೆಪಿ ಸರ್ಕಾರವು ಉಪಕ್ರಮ ಕೈಗೊಂಡಿತ್ತು. ಉನ್ನತ ಶಿಕ್ಷಣ ಎಲ್ಲರಿಗೂ ಸಿಗಬೇಕು. ದೂರ ಪ್ರಯಾಣಿಸಿ ಉನ್ನತ ಶಿಕ್ಷಣಕ್ಕಾಗಿ ಹೆಚ್ಚು ಖರ್ಚು ಮಾಡಲಾಗದವರು ತಮ್ಮೂರಿನಲ್ಲೇ ಹೆಚ್ಚಿನ ಶಿಕ್ಷಣ ಪಡೆಯಲಿ ಎನ್ನುವ ಆಶಯ ಇದರ ಹಿಂದೆ ಇತ್ತಾದರೂ ಇದರಿಂದ ಉಂಟಾಗುತ್ತಿರುವ ಆರ್ಥಿಕ ಹೊರೆ ತಪ್ಪಿಸಲು ಸಂಪುಟ ಉಪ ಸಮಿತಿಯು ಹಿಂದಿನಂತೆಯೇ ವಿಶ್ವವಿದ್ಯಾನಿಲಯ ಉಳಿಸಲು ಮುಂದಾಗಿದೆ.

ಕರ್ನಾಟಕದಲ್ಲಿ ಬೆಂಗಳೂರು ವಿವಿ ವಿಭಜಿಸಿ ಬೆಂಗಳೂರು ಮಹಾರಾಣಿ ಕ್ಲಸ್ಟರ್‌, ಬೆಂಗಳೂರು ನೃಪತುಂಗ ವಿಶ್ವವಿ...