Bangalore, ಫೆಬ್ರವರಿ 24 -- ಬೆಂಗಳೂರು: 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಶಾಲಾಶುಲ್ಕದಲ್ಲಿ ಶೇ.10 ರಿಂದ ಶೇ.30ರಷ್ಟು ಹೆಚ್ಚಳ ಮಾಡಲು ರಾಜ್ಯ ರಾಜಧಾನಿ ಬೆಂಗಳೂರಿನ ಬಹುತೇಕ ಖಾಸಗಿ ಶಾಲೆಗಳು ನಿರ್ಧರಿಸಿವೆ. ಖಾಸಗಿ ಶಾಲೆಗಳ ಈ ನಿರ್ಧಾರದಿಂದ ಪೋಷಕರು ಕಂಗಾಲಾಗಿದ್ದು ಏಕಾಏಕಿ ಒಂದೇ ವರ್ಷದಲ್ಲಿ ಅವೈಜ್ಞಾನಿಕ ಶುಲ್ಕ ಹಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅನೇಕ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷದ ಶುಲ್ಕವನ್ನು ಸಂಗ್ರಹಿಸಲು ಆರಂಭಿಸಿವೆ. ಕೆಲವು ಶಾಲೆಗಳು ಶೇ.10 ರಿಂದ 15ರಷ್ಟು ಶುಲ್ಕ ಹೆಚ್ಚಳ ಮಾಡಿದ್ದರೆ ಇನ್ನೂ ಕೆಲವು ಶಾಲೆಗಳು ಶೇ.30 ರವೆಗೆ ಶುಲ್ಕ ಹೆಚ್ಚಿಸಿವೆ. ಕಳೆದ ಐದು ವರ್ಷಗಳ ಶಾಲಾ ಶುಲ್ಕ ಹೆಚ್ಚಳ ವಿಪರೀತ ಹೆಚ್ಚಳವಾಗುತ್ತಿದೆ. ಐದು ವರ್ಷಗಳ ಹಿಂದೆ 1.2 ಲಕ್ಷದಷ್ಟಿದ್ದ ಶುಲ್ಕ ಈ ವರ್ಷ 2.1 ಲಕ್ಷಕ್ಕೆ ಏರಿಕೆಯಾಗಿದೆ. ಇದರ ಜತೆಗೆ ಸಾರಿಗೆ ಶುಲ್ಕವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ.

ಶಾಲಾ ಶುಲ್ಕ ಕೋವಿಡ್‌ಗೂ ಮುನ್ನ ಶೇ.10 ರಷ್ಟು ಶುಲ್ಕ ಏರಿಕೆಯಾಗುತ್ತಿತ್ತು. ಆದರೆ ಕೋವಿಡ್...