Bangalore, ಮಾರ್ಚ್ 14 -- Education News: ವಿಜ್ಞಾನ ಶಿಕ್ಷಣದ ಲಭ್ಯತೆಯನ್ನು ಸುಧಾರಿಸುವ ಮಹತ್ವದ ಪ್ರಯತ್ನದಲ್ಲಿ, ಪ್ರಯೋಗ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್ ಮತ್ತು ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಾದ ʼಮರ್ಕ್ʼ, ʼಪ್ರಯೋಗʼದ ನವೀನ ಕಾರ್ಯಕ್ರಮ ʼಕ್ರಿಯಾʼವನ್ನು ಚಾಮರಾಜನಗರ, ಧಾರವಾಡ, ಬೀದರ್, ಗದಗ ಮತ್ತು ಮಂಡ್ಯ ಸೇರಿದಂತೆ ಕರ್ನಾಟಕದ 35 ಶೈಕ್ಷಣಿಕ ಜಿಲ್ಲೆಗಳ 45 ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಲು ಕೈ ಜೋಡಿಸಿವೆ. ಈ ಸಹಭಾಗಿತ್ವ ವಿಜ್ಞಾನ ಶಿಕ್ಷಣಕ್ಕಾಗಿ ಪ್ರಾಯೋಗಿಕ ಕಲಿಕಾ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವ ಗುರಿ ಹೊಂದಿದೆ, ಅಲ್ಲದೇ ಇದು ಸಕ್ರಿಯ ಅನ್ವೇಷಣೆಯ ಮೂಲಕ ವೈಜ್ಞಾನಿಕ ವಿಚಾರಗಳ ಉತ್ತಮ ಗ್ರಹಿಕೆಯನ್ನು ಒದಗಿಸುತ್ತದೆ. ಈ 45 ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಪಠ್ಯಕ್ರಮ ಮತ್ತು ಪಠ್ಯಕ್ರಮದ ಅಗತ್ಯಗಳಿಗೆ ಅನುಗುಣವಾಗಿ ವಿಶೇಷವಾಗಿ ಆಯ್ಕೆ ಮಾಡಿದ ಸಾಮಗ್ರಿಗಳನ್ನು ಒಳಗೊಂಡಿರುವ ಸಮಗ್ರ ಪ್ರಯೋಗಾಲಯ ಕೇಂದ್ರವನ್ನು ಅಳವಡಿಸಲಾಗಿದೆ.

ಈ ವ್ಯವಸ್ಥೆ ಪ್ರತಿಯೊಬ್ಬ ವಿದ್ಯಾರ್ಥ...