ಭಾರತ, ಜನವರಿ 26 -- Economic Survey: ಕೇಂದ್ರ ಬಜೆಟ್ 2025ರ ನಿರೀಕ್ಷೆ ದೇಶದ ಉದ್ದಗಲಕ್ಕೂ ಹೆಚ್ಚಾಗತೊಡಗಿದೆ. ಇದಕ್ಕೂ ಮೊದಲೆ, ಕೇಂದ್ರ ಬಜೆಟ್‌ನ ಮುನ್ನೋಟ ನೀಡುವ ಆರ್ಥಿಕ ಸಮೀಕ್ಷೆ 2024-25 (Economic Survey 2024-25) ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಆರ್ಥಿಕ ಸಮೀಕ್ಷೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜನವರಿ 31 ರಂದು ಸಂಸತ್‌ನಲ್ಲಿ ಮಂಡಿಸಲಿದ್ದಾರೆ. ಅದರ ಬೆನ್ನಿಗೆ, ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಸಲಹೆಗಾರ ವಿ ಅನಂತ ನಾಗೇಶ್ವರನ್ ಅವರು ಆರ್ಥಿಕ ಸಮೀಕ್ಷೆ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಲಿದ್ದಾರೆ. ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2025 ಮಂಡಿಸಲಿದ್ದಾರೆ.

ಆರ್ಥಿಕ ಸಮೀಕ್ಷೆಯು ಭಾರತದ ಆರ್ಥಿಕ ಕಾರ್ಯಕ್ಷಮತೆಯ ಸಂಪೂರ್ಣ ವಿಶ್ಲೇಷಣೆ ಮಾಡುತ್ತಿದ್ದು, ಸರ್ಕಾರದ ಹಣಕಾಸಿನ ಕಾರ್ಯತಂತ್ರ ಮತ್ತು ನೀತಿ ನಿರ್ಧಾರಗಳ ಸುಳಿವನ್ನು ಒದಗಿಸುತ್ತದೆ. ಹಿಂದಿನ ಆರ್ಥಿಕ ವರ್ಷದ ಅಂದರೆ 2024-25ರಲ್ಲಿ ದೇಶದ ಅರ್ಥ ವ್ಯವಸ್ಥೆಯ ಸಮಗ್ರ ...