ಭಾರತ, ಮಾರ್ಚ್ 25 -- ಜಗತ್ತಿನಾದ್ಯಂತ ಅಸಂಖ್ಯಾತ ಕ್ರೈಸ್ತ ಬಾಂಧವರ ಪ್ರಮುಖ ಹಬ್ಬವೆಂದರೆ ಅದು ಕ್ರಿಸ್ಮಸ್. ಯೇಸು ಕ್ರಿಸ್ತನ ಜನ್ಮದಿನವನ್ನು ಕ್ರಿಸ್ಮನ್ ಆಗಿ ಆಚರಿಸಲಾಗುತ್ತದೆ. ಇದರ ನಂತರ ಕ್ರಿಶ್ಚಿಯನ್ನರಿಗೆ ಇರುವ ಮತ್ತೊಂದು ಪ್ರಮುಖ ಹಬ್ಬವೆಂದರೆ ಅದು ಈಸ್ಟರ್. ಕ್ರಿಶ್ಚಿಯನ್ ಧರ್ಮದ ಪ್ರಮುಖ ರಜಾದಿನಗಳಲ್ಲಿ ಇದು ಕೂಡ ಒಂದಾಗಿದೆ. ಈ ಬಾರಿ ಅಂದರೆ 2025 ರ ಏಪ್ರಿಲ್ 20 (ಭಾನುವಾರ) ರಂದು ಈಸ್ಟರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಯೇಸುವನ್ನು ಶಿಲುಬೆಗೇರಿಸಿ ಮರಣ ಹೊಂದಿದ ಮೂರು ದಿನಗಳ ನಂತರ ಪುನರುತ್ಥಾನವನ್ನು ಇದು ಸೂಚಿಸುತ್ತದೆ. ಯೇಸುವನ್ನು ಶಿಲುಬೆಗೇರಿಸಿದ ನಂತರ ಆತ ಇಹಲೋಕವನ್ನು ತ್ಯಜಿಸುತ್ತಾರೆ. ನಂತರ ಅಂದರೆ ಮೂರು ದಿನಗಳ ಬಳಿಕ ಸಮಾಧಿಯಿಂದ ಎದ್ದು ಬಂದಿದ್ದಾರೆ ಎಂಬ ನಂಬಿಕೆ ಇದೆ. ಇದನ್ನೇ ಯೇಸು ಕ್ರಿಸ್ತನ ಪುನರುತ್ಥಾನವಾದ ಈಸ್ಟರ್ ಎಂದು ಕರೆಯಲಾಗುತ್ತದೆ. ಅಂದು ಉಪವಾಸ ಪ್ರಾರ್ಥನೆಯ ಬಳಿಕ ಈಸ್ಟರ್ ಆಚರಿಸಲಾಗುತ್ತದೆ. ಇದು ಹೊಸ ಜೀವನದ ಸಂಕೇತವಾಗಿದೆ ಎಂದು ಕ್ರೈಸ್ತ ಸಮುದಾಯವು ನಂಬುತ್ತ...