Bangalore, ಏಪ್ರಿಲ್ 8 -- Dwarakish: ಕನ್ನಡದ ಅತ್ಯಂತ ಸಾಹಸಿ ನಿರ್ಮಾಪಕರೆಂದರೆ ಅದು ದ್ವಾರಕೀಶ್‍. ಅವರಷ್ಟು ಗೆಲುವು, ಸೋಲು, ಸಾಲ, ನೋವು, ನಷ್ಟವನ್ನು ಕನ್ನಡ ಚಿತ್ರರಂಗದಲ್ಲಿ ನೋಡಿದ ಮತ್ತೊಮ್ಮ ನಿರ್ಮಾಪಕರು ಸಿಗಲಿಕ್ಕಿಲ್ಲ. ಇವೆಲ್ಲವನ್ನೂ ಅವರು ಅನುಭವಿಸಿದ್ದಷ್ಟೇ ಅಲ್ಲ, ಅದರ ನಡುವೆಯೂ ಚಿತ್ರಗಳನ್ನು ನಿರ್ಮಿಸುತ್ತಿದ್ದರು. ಕನ್ನಡದಲ್ಲಿ ಶಂಕರ್ ಸಿಂಗ್‍ ಮತ್ತು ಪಾರ್ವತಮ್ಮ ರಾಜಕುಮಾರ್‌ ಅವರನ್ನು ಹೊರತುಪಡಿಸಿದರೆ, ಅತೀ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ ನಿರ್ಮಾಪಕರೆಂದರೆ ಅದು ದ್ವಾರಕೀಶ್‍ ಮಾತ್ರ.

ಒಂದು ಕಾಲಕ್ಕೆ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ ದ್ವಾರಕೀಶ್‍, 1985ರ ನಂತರ ಎಷ್ಟೆಲ್ಲಾ ಕಷ್ಟ ಅನುಭವಿಸಬೇಕಾಯಿತು, ಹಣ ಮತ್ತು ಗೆಲುವು ಇಲ್ಲದೆ ತಾನು ಹೇಗೆ ಒಂಟಿಯಾದೆ ಎಂದು ಅವರು ಚಿತ್ರಲೋಕ ಡಾಟ್‍ಕಾಂನ ವೀರೇಶ್‍ ನಡೆಸಿದ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಈ ಕುರಿತು ಮಾತನಾಡಿರುವ ಅವರು, '1985ರವರೆಗೂ ದ್ವಾರಕೀಶ್‍ನ ಅತ್ಯಂತ ಯಶಸ್ವಿ ವರ್ಷಗಳು. ಆ ದಿನಗಳು ಪುನಃ ನನಗೆ ಬರಲೇ ಇಲ್ಲ. 'ನೀ ಬರೆದ ಕ...