Bangalore, ಮಾರ್ಚ್ 17 -- ಎಲ್ಲರೊಳಗೊಂದಾಗು:ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗುಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆಎಲ್ಲರೊಳಗೊಂದಾಗು ಮಂಕುತಿಮ್ಮ

ಯುಕ್ತಿ:

ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆಕೊನೆಯೆಲ್ಲಿ? ಚಿಂತಿಸೆಲೊ - ಮಂಕುತಿಮ್ಮ

ನಗು:ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮನಗುತ ಕೇಳುತ ನಗುವುದತಿಶಯದ ಧರ್ಮನಗುವ ನಗಿಸುವ ನಗಿಸಿ ನಗುತ ಬಾಳುವ ವರವ-ಮಿಗೆ ನೀನು ಬೇಡಿಕೊಳೊ -ಮಂಕುತಿಮ್ಮ

ನಂಬಿಕೆ:

ನಂಬು ದೇವರ ನಂಬು , ನಂಬೆನ್ನುವುದು ಲೋಕಕಂಬನಿಯನಿಡುವ ಜನ ನಂಬಲೋಲ್ಲದರೇಂಹಂಬಲನೆ ತೊರೆದಂಗೆ ನಂಬಿಕೆಯ ಹಂಗೇಕೆತುಂಬು ವಿರತಿಯ ಮನದಿ ಮಂಕುತಿಮ್ಮ

ದುರಾಸೆ:

ಬೇಕು ಬೇಕದು ಬೇಕು ಎನಗಿನ್ನೊಂದುಬೇಕೆನುತ ಬೊಬ್ಬಿಡುತಲಿಹ ಘಟವನಿದನುಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪಸಾಕೆನಿಪುದೆಂದಿಗೆಲೊ ಮಂಕುತಿಮ್ಮ

ಆನಂದ:ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊಮಾನವಂ ಪ್ರಣಯದೊಳೊ ವೀರ ವ...