Bengaluru, ಫೆಬ್ರವರಿ 21 -- Dude Movie: ಸ್ಯಾಂಡಲ್‌ವುಡ್‌ನಲ್ಲಿ ಫುಟ್ಬಾಲ್‍ ಹಿನ್ನೆಲೆಯ ಚಿತ್ರಗಳು ಬಂದಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯತ್ನವನ್ನು 'ರಿವೈಂಡ್‍', 'ರಾಮಾಚಾರಿ 2.0' ಚಿತ್ರಗಳ ಖ್ಯಾತಿಯ ನಟ- ನಿರ್ದೇಶಕ ತೇಜ್‍ ಮಾಡುತ್ತಿದ್ದು, ಚಿತ್ರಕ್ಕೆ 'ಡ್ಯೂಡ್‍' ಎಂಬ ಹೆಸರಿಟ್ಟಿದ್ದಾರೆ. ಈ ಚಿತ್ರದಲ್ಲಿ ಅವರು 12 ಹೊಸ ನಾಯಕಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಅರ್ಧ ಚಿತ್ರೀಕರಣ ಮುಗಿಸಿರುವ ತೇಜ್‍, ಇತ್ತೀಚೆಗೆ ಚಿತ್ರದ ಹಾಡು ಬಿಡುಗಡೆ ಮಾಡಿದ್ದಾರೆ.

ಹಾಡು ಬಿಡುಗಡೆ ಮಾಡಿ ಮಾತನಾಡಿದ ಮೇಘನಾ ರಾಜ್, 'ತೇಜ್‍ ಅವರ ಎಲ್ಲಾ ಪ್ರಯತ್ನಗಳಿಗೂ ನಮ್ಮ ಕುಟುಂಬದ ಪ್ರೋತ್ಸಾಹ ಇದ್ದೇ ಇರುತ್ತದೆ. ಈ ಚಿತ್ರದ ಹಾಡು ಬಿಡುಗಡೆ ಮಾಡಿಕೊಡಬೇಕು ಎಂದಾಗ ಖಂಡಿತಾ ಬರುತ್ತೇನೆ ಎಂದೆ. ಅವರು ನಮ್ಮ ಮನೆಗೆ ಬಂದು ಕ್ರೀಡಾ ಹಿನ್ನೆಲೆಯ ಚಿತ್ರ ಮಾಡುತ್ತಿದ್ದೇನೆ ಎಂದಾಗ, 'ಚಕ್‍ದೇ ಇಂಡಿಯಾ' ಮಾದರಿಯ ಚಿತ್ರವಾ ಎಂದು ಕೇಳಿದೆವು. ತಮಿಳಿನ 'ಬಿಜಿಲ್‍' ಮಾದರಿಯ ಚಿತ್ರ ಇರಬಹುದು ಅಂದುಕೊಂಡೆವು. ...