Bangalore, ಜನವರಿ 27 -- ಚಳಿಗಾಲದಲ್ಲಿ ಜನರಿಗೆ ಆರೋಗ್ಯ ವ್ಯತ್ಯಾಸವಾಗುವುದು ಮತ್ತು ವಿವಿಧ ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಅದರಲ್ಲೂ ಶೀತ, ಜ್ವರ ಮತ್ತು ಕೆಮ್ಮು ಹಾಗೂ ನೆಗಡಿ ಹೆಚ್ಚಾಗಿ ಸಮಸ್ಯೆ ತರುತ್ತದೆ. ಕೆಲವೊಮ್ಮೆ ಕಡಿಮೆ ಅವಧಿಗೆ ಶೀತ, ಕೆಮ್ಮು ಬಂದು ಹೋದರೆ ಮತ್ತೆ ಕೆಲವೊಮ್ಮೆ ವಾರವಾದರೂ ಕಡಿಮೆಯಾಗಿರುವುದಿಲ್ಲ. ಅಲ್ಲದೆ, ಸಣ್ಣಪುಟ್ಟ ಶೀತ, ಜ್ವರ ಮತ್ತು ಕೆಮ್ಮು ಬಂದಾಗ ಅದಕ್ಕೆ ವೈದ್ಯರ ಬಳಿ ತೆರಳುವುದು ಅಷ್ಟು ಸೂಕ್ತವಲ್ಲ. ಅದರ ಬದಲು, ಮನೆಯಲ್ಲೇ ತಯಾರಿಸಿದ ಮದ್ದು ಉತ್ತಮ.

ಕೆಲವೊಮ್ಮೆ ಕೆಮ್ಮು ಬಂದರೆ ದಿನಪೂರ್ತಿ ಬರುತ್ತಲೇ ಇರುತ್ತದೆ. ಮತ್ತು ವಾರವಾದರೂ ಕಡಿಮೆಯಾಗಿರುವುದಿಲ್ಲ. ಒಣಕೆಮ್ಮುವಿನಿಂದಾಗಿ ಗಂಟಲು ಒಣಗುತ್ತದೆ, ಚರ್ಮ ಕೂಡ ಶುಷ್ಕವಾಗುತ್ತದೆ. ಗಂಟಲಿನಲ್ಲಿ ಕಿರಿಕಿರಿ ಉಂಟಾಗಿ, ಆಹಾರ ತಿನ್ನುವಾಗಲೂ ಸಮಸ್ಯೆಯಾಗಬಹುದು.

ನಿಮಗೆ ಒಣಕೆಮ್ಮು ಸಮಸ್ಯೆ ಉಂಟಾದಾಗ, ಗಂಟಲಿನಲ್ಲಿ ಒಂದು ರೀತಿಯ ಉರಿ ಉಂಟಾಗಬಹುದು. ಜತೆಗೆ ಕೆರೆತದ ಅನುಭವವಾಗಬಹುದು. ಇದರಿಂದಾಗಿ ನೀವು ನಿರಂತರ ಕೆಮ್ಮುತ...