ಭಾರತ, ಏಪ್ರಿಲ್ 18 -- ಸರ್ವಕಾಲದಲ್ಲೂ ಲಭ್ಯವಿರುವ ನುಗ್ಗೆಕಾಯಿ ಸೇವನೆಯು ಆರೋಗ್ಯಕ್ಕೆ ಬಹಳ ಉತ್ತಮ. ಹಲವರಿಗೆ ನುಗ್ಗೆಕಾಯಿ ಫೇವರಿಟ್‌ ಎಂದರೂ ತಪ್ಪಾಗಲಿಕ್ಕಿಲ್ಲ. ಊಟದೊಂದಿಗೆ ಬೇಳೆ, ಮಸಾಲೆ ಸೇರಿಸಿ ತಯಾರಿಸಿದ ನುಗ್ಗೆಕಾಯಿ ಸಾಂಬಾರ್‌ ಇದ್ರೆ, ಆಹಾ ಸ್ವರ್ಗ ಸುಖ ಅಂದುಕೊಳ್ಳುವವರೂ ಇದ್ದಾರೆ. ಇದ್ರಿಂದ ಸಾಂಬಾರ್‌ ಮಾತ್ರವಲ್ಲ ಉಪ್ಪಿನಕಾಯಿ ಕೂಡ ತಯಾರಿಸಬಹುದು. ಉಪ್ಪಿನಕಾಯಿ ಅಂದ ಕೂಡಲೇ ಬಾಯಲ್ಲಿ ನೀರು ಬಂತಾ, ಉಪ್ಪಿನಕಾಯಿ ರುಚಿನೇ ಹಾಗೆ ಅಲ್ವಾ?.

ಈಗಂತೂ ಬೇಸಿಗೆಕಾಲ, ಉಪ್ಪಿನಕಾಯಿ ಮಾಡೋಕೆ ಹೇಳಿ ಮಾಡಿಸಿದ ಟೈಮ್‌. ನುಗ್ಗೆಕಾಯಿ ಉಪ್ಪಿನಕಾಯಿ ಮಾಡಿ ಭರಣಿಯಲ್ಲಿ ಸಂಗ್ರಹಿಸಿ ಇಡಿ. ಇದು 6 ತಿಂಗಳ ಕಾಲ ಕೆಡದಂತೆ ಇರುತ್ತದೆ. ಇದರ ರುಚಿ ಕೂಡ ಅದ್ಭುತ. ನುಗ್ಗೆಕಾಯಿ ಸಾಂಬಾರ್‌ಗಿಂತ ಇದರ ಉಪ್ಪಿನಕಾಯಿಯೇ ಸಖತ್‌ ಟೇಸ್ಟ್‌. ಹಾಗಾದ್ರೆ ಇದನ್ನು ಮಾಡೋದು ಹೇಗೆ ನೋಡಿ.

ಬೇಕಾಗುವ ಸಾಮಗ್ರಿಗಳು: ನುಗ್ಗೆಕಾಯಿ - 5, ಓಮ - ಒಂದು ಚಮಚ, ಅಡುಗೆ ಎಣ್ಣೆ - ಒಂದು ಕಪ್, ಹುಣಸೆಹಣ್ಣು - ಸುಮಾರು ನಿಂಬೆಹಣ್ಣಿನ ಗಾತ್ರ, ಅರಿಶಿನ - ಅರ್ಧ ಚ...