Bangalore, ಏಪ್ರಿಲ್ 15 -- ಡಾ. ರಾಜ್‌ಕುಮಾರ್‌: ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಹಿರಿಯ ನಿರ್ದೇಶಕ ಭಾರ್ಗವ ಪ್ರಮುಖರು. ಅಷ್ಟೇ ಅಲ್ಲ, 50 ಚಿತ್ರಗಳನ್ನು ನಿರ್ದೇಶಿಸಿದ ಬೆರಳಣಿಕೆಯ ನಿರ್ದೇಶಕರಲ್ಲೊಬ್ಬರು. ಅವರು ನಿರ್ದೇಶಕರಾಗಿದ್ದು ಡಾ. ರಾಜಕುಮಾರ್ ಅಭಿನಯದ 'ಭಾಗ್ಯವಂತರು' ಚಿತ್ರದ ಮೂಲಕ. ದ್ವಾರಕೀಶ್‍ ನಿರ್ಮಾಣದ ಈ ಚಿತ್ರವು ಭಾರ್ಗವ ಅವರ ಚಿತ್ರಜೀವನದಲ್ಲಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲೇ ಒಂದು ಯಶಸ್ವಿ ಮತ್ತು ಜನಪ್ರಿಯ ಚಿತ್ರವಾಗಿ ರೂಪುಗೊಂಡಿದೆ. ಈ ಚಿತ್ರ ರೂಪುಗೊಂಡಿದ್ದು ಹೇಗೆ?

ಈ ಕುರಿತು ಮಾತನಾಡಿರುವ ಭಾರ್ಗವ, 'ನಾನು ಈ ಚಿತ್ರ ಮಾಡುವಾಗ, ಈ ಚಿತ್ರ ನನ್ನ ವೃತ್ತಿಜೀವನಕ್ಕೆ ದೊಡ್ಡ ಕಾಣಿಕೆ ನೀಡುತ್ತದೆ ಎಂದು ಭಾವಿಸಿರಲಿಲ್ಲ. ನಿರ್ದೇಶನ ಮಾಡಬೇಕಿತ್ತು, ಮಾಡುತ್ತಿದ್ದೆ ಅಷ್ಟೇ. ರಾಜಕುಮಾರ್‍ ಅವರನ್ನು ನಿರ್ದೇಶನ ಮಾಡುವುದಕ್ಕೆ ನನಗೆ ಧೈರ್ಯ ಇರಲಿಲ್ಲ. ಅದರ ನಡುವೆಯೇ ನಾನು ನಿರ್ದೇಶನ ಮಾಡಿದೆ. ಅದಕ್ಕೆ ಕಾರಣ, ನಾನು ಡಾ. ರಾಜಕುಮಾರ್‌‍ ಅಭಿನಯದ 'ಶ್ರೀ ಕನ್ಯಕಾ ಪರಮೇಶ್ವರಿ ಕಥಾ', 'ಮೇಯರ್‌‍ ಮುತ...