ಭಾರತ, ಏಪ್ರಿಲ್ 12 -- Dr Rajkumar Death Anniversary: ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗ ಕಂಡ ಮೇರು ವ್ಯಕ್ತಿತ್ವ ಡಾ. ರಾಜ್‌ಕುಮಾರ್ ಅವರದ್ದು. ಅಭಿಮಾನಿಗಳ ಆರಾಧ್ಯ ದೈವ ಡಾ. ರಾಜ್ ಎಂದೆಂದಿಗೂ ಕನ್ನಡ ಸಿನಿ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದವರು. ಇವರು ನಮ್ಮನ್ನು ಅಗಲಿ ಇಂದಿಗೆ (ಏಪ್ರಿಲ್ 12) 19 ವರ್ಷಗಳು ಕಳೆದಿವೆ. ರಾಜ್‌ಕುಮಾರ್ ಪುಣ್ಯಸ್ಮರಣೆಯ ದಿನವಾದ ಇಂದು ಅಭಿಮಾನಿಗಳು, ಕುಟುಂಬದವರು, ಆಪ್ತರು ಹಾಗೂ ಅಪಾರ ಅಭಿಮಾನಿಗಳು ಅವರನ್ನು ಸ್ಮರಿಸುತ್ತಿದ್ದಾರೆ.

ಕೇವಲ ನಟನೆಯ ಮೂಲಕ ಮಾತ್ರವಲ್ಲ, ತಮ್ಮ ವ್ಯಕ್ತಿತ್ವದ ಮೂಲಕವೂ ಜನರಿಗೆ ಹತ್ತಿರವಾದವರು ಡಾ ರಾಜ್‌ಕುಮಾರ್‌. ಅಭಿಮಾನಿಗಳನ್ನೇ ದೇವರೆಂದು ಕರೆದು, ಹಾಗೆಯೇ ನಡೆದುಕೊಳ್ಳುತ್ತಿದ್ದ ಅವರು ಕರ್ನಾಟಕ ಮಾತ್ರವಲ್ಲದೇ ಭಾರತದಾದ್ಯಂತ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದರು. ಜನರು, ಸಮಾಜಕ್ಕಾಗಿ ಮಿಡಿಯುತ್ತಿದ್ದ ಡಾ. ರಾಜ್ ಅವರ ಪುಣ್ಯಸ್ಮರಣೆಯ ಸಲುವಾಗಿ ಪ್ರತಿ ವರ್ಷ ಅವರ ಅಭಿಮಾನಿಗಳು ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ...