Bengaluru, ಫೆಬ್ರವರಿ 8 -- Dr Rajkumar: ಕನ್ನಡದ ಮೇರು ನಟ, ನಟಸಾರ್ವಭೌಮ ಡಾ ರಾಜ್‌ಕುಮಾರ್‌ ಭೌತಿಕವಾಗಿ ನಮ್ಮ ನಡುವೆ ಇಲ್ಲವಾಗಿಯೇ 19 ವರ್ಷಗಳಾದವು. ಹೊಸದಾದ ಎರಡು ಜನರೇಷನ್‌ ಸೃಷ್ಟಿಯ ಬಳಿಕವೂ, ಇಂದಿಗೂ ಅಣ್ಣಾವ್ರ ಬಗ್ಗೆ ಕರುನಾಡು ಮಾತನಾಡುತ್ತದೆ. ಆ ಮಟ್ಟಿಗೆ ನಾಡಿನ ಮಣ್ಣಿನಲ್ಲಿ ಬೆರೆತಿದ್ದಾರವರು. ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಮುಖವಾಣಿಯಾಗಿ ನಿಂತಿದ್ದ ಇದೇ ವರನಟನಿಗೆ 1976ರ ಫೆಬ್ರವರಿ 8ರಂದು ವಿಶೇಷ ಗೌರವವೊಂದು ಅವರನ್ನು ಅರಸಿ ಬಂದಿತ್ತು. ಇದೀಗ ಆ ಗೌರವಕ್ಕೆ ಭರ್ತಿ 49 ವರ್ಷ!

ಫೆಬ್ರವರಿ 8 ಬಂತೆಂದರೆ ಅವರ ಎಲ್ಲ ಅಭಿಮಾನಿಗಳು, ಕನ್ನಡ, ಕರ್ನಾಟಕ ಮತ್ತು ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರೀತಿಸುವವರಿಗೆ ಸ್ಮರಣೀಯ ದಿನ. ಏಕೆಂದರೆ ಈ ದಿನ ಅವರಿಗೆ ಮೈಸೂರು ವಿಶ್ವವಿದ್ಯಾಲಯ ನಟನಾ ಕ್ಷೇತ್ರದಲ್ಲಿನ ಅದ್ವಿತೀಯ ಸಾಧನೆ ಗುರುತಿಸಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿತ್ತು. ಈಗ ಇಂದಿಗೆ ಆ ಗೌರವಕ್ಕೆ 45 ವರ್ಷಗಳು. ಇದಾದ ಬಳಿಕ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿಯೂ ...