Bengaluru, ಮಾರ್ಚ್ 30 -- Dr Rajkumar: ಡಾ ರಾಜ್‌ಕುಮಾರ್‌ ಕರುನಾಡಿನ ಸಾಂಸ್ಕೃತಿಕ ರಾಯಭಾರಿ. ಕನ್ನಡ ನೆಲ, ಜಲ ಭಾಷೆ ವಿಚಾರಕ್ಕೆ ಸಿನಿಮಾಗಳ ಮೂಲಕ, ವೈಯಕ್ತಿಕ ನಿಲುವಿನಿಂದ ತಮ್ಮದೇ ಆದ ಅಪಾರ ಕೊಡುಗೆ ನೀಡಿದವರು. ಇಂದಿಗೂ ಕರ್ನಾಟಕದಲ್ಲಿ ಅವರನ್ನು ನಿತ್ಯ ಪೂಜಿಸುವವರಿದ್ದಾರೆ. ಅಪ್ಪನ ಹಾದಿಯಲ್ಲಿ ಕಿರಿ ಮಗ‌ ಕರ್ನಾಟಕ ರತ್ನ, ದಿವಂಗತ ಪುನೀತ್ ರಾಜ್‌ಕುಮಾರ್‌ ಅವರನ್ನೂ ಸ್ಮರಿಸುತ್ತಿದ್ದಾರೆ. ಇದೀಗ ಇದೇ ಕಲಾವಿದರ ಹುಟ್ಟೂರಿನಲ್ಲಿ ಭವ್ಯ ಮ್ಯೂಸಿಯಂ ನಿರ್ಮಾಣಕ್ಕೆ ಅಲ್ಲಿನ ಶಾಸಕರು, ಸ್ಥಳೀಯ ನಾಯಕರು ನಿರ್ಧರಿಸಿ, ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಸಿಂಗಾನಲ್ಲೂರು, ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಹಳ್ಳಿ. ಇದೀಗ ಇದೇ ಸಿಂಗಾನಲ್ಲೂರು ಗ್ರಾಮದಲ್ಲಿ ಅಣ್ಣಾವ್ರ ಕುಟುಂಬಕ್ಕೆ ಸಂಬಂಧಿಸಿದಂತೆ ಮ್ಯೂಸಿಯಂ ನಿರ್ಮಾಣ ಮಾಡಿ, ಪ್ರವಾಸಿ ತಾಣವಾಗಿ ರೂಪುಗೊಳಿಸಲು ಹನೂರು ಶಾಸಕ ಎಂ.ಆರ್. ಮಂಜುನಾಥ್ ನಿರ್ಧರಿಸಿದ್ದಾರೆ. ಈ ಯೋಜನೆ ಸಾಕಾರಗೊಂಡರೆ ಪ್ರವಾಸೋದ್ಯಮವೂ ಮತ್ತಷ್ಟು ಅಭಿವೃದ್ಧಿ ಹೊಂದಲಿ...