Bangalore, ಏಪ್ರಿಲ್ 2 -- 30 ವರ್ಷಗಳ ಹಿಂದೆ ಬಿಡುಗಡೆಯಾದ 'ಮೇಘಮಾಲೆ' ಚಿತ್ರದ ಮೂಲಕ ಹೀರೋ ಆದವರು ಸುನಾದ್ ರಾಜ್. ಆ ಚಿತ್ರದ ನಂತರ ಅವರು 'ಗಣೇಶ ಐ ಲವ್ ಯೂ', 'ಮಧುರ ಮೈತ್ರಿ' ಮತ್ತು 'ಕಡ್ಲಿಮಟ್ಟಿ ಸ್ಟೇಶನ್ ಮಾಸ್ಟರ್' ಚಿತ್ರಗಳಲ್ಲಿ ನಟಿಸಿದರು. 'ಕಡ್ಲಿಮಟ್ಟಿ ಸ್ಟೇಶನ್ ಮಾಸ್ಟರ್' ಚಿತ್ರದ ನಂತರ ಚಿತ್ರರಂಗದಿಂದ ದೂರವೇ ಇದ್ದ ಸುನಾದ್ ರಾಜ್, ಈಗ 25 ವರ್ಷಗಳ ನಂತರ ಡಾ. ರಾಜಕುಮಾರ್ ಮೊಮ್ಮಗ ಷಣ್ಮುಖ ಗೋವಿಂದರಾಜ್ ಅಭಿನಯದ 'ನಿಂಬಿಯಾ ಬನಾದ ಮ್ಯಾಗ' ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರವು ಏಪ್ರಿಲ್ 04ರಂದು ಬಿಡುಗಡೆಯಾಗುತ್ತಿದೆ.
'ನಿಂಬಿಯಾ ಬನಾದ ಮ್ಯಾಗ' ಚಿತ್ರರಂಗಕ್ಕೆ ವಾಪಸ್ಸಾದ ಕುರಿತು ಮಾತನಾಡುವ ಸುನಾದ್ ರಾಜ್, '25 ವರ್ಷಗಳ ಗ್ಯಾಪ್‍ನ ನಂತರ ಮತ್ತೆ ನಟಿಸಿದ್ದೇನೆ. ನಿನ್ನ ಲೈಫ್‍ನಲ್ಲಿ ಏನು ಮಿಸ್ ಮಾಡಿಕೊಳ್ಳುತ್ತೀಯ ಎಂದು ಮಗಳು ಕೇಳಿದಳು. ಸಿನಿಮಾ ಅಂತಲೇ ಯಾವತ್ತೂ ಹೇಳುತ್ತೇನೆ. ಸಿನಿಮಾದಲ್ಲಿ ನಟಿಸಬೇಕು ಎಂಬ ಆಸ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.