ಭಾರತ, ಫೆಬ್ರವರಿ 24 -- ಡಾಕ್ಟರ್ ಬ್ರೋ ತಮ್ಮ ವಿಭಿನ್ನ ಅನುಭವಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತ ಸಾಹಸಮಯ ಸನ್ನಿವೇಷಗಳನ್ನು ಎದುರಿಸುತ್ತಾ ಸಾಗುತ್ತಿರುತ್ತಾರೆ. ತಾವು ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿನ ವಿಡಿಯೋ ಮಾಡಿ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಅದೇ ರೀತಿ ಈ ಬಾರಿ ಡಾಕ್ಟರ್ ಬ್ರೋ ನೇಪಾಳಕ್ಕೆ ಹೋದಾಗಿನ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಲ್ಲಿನ ಜೀವಂತ ದೇವತೆಗಳು ಅಂದರೆ ಕುಮಾರಿಯರ ಪರಿಚಯ ಹಾಗೂ ಅವರ ಜೀವನಶೈಲಿ ಹೇಗಿರುತ್ತದೆ ಎಂಬ ವಿಚಾರದ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಸರಳ ನಿರೂಪಣೆಯ ಮೂಲಕ ಎಲ್ಲವನ್ನೂ ವಿವರಿಸಿದ್ದಾರೆ.

ಕುಮಾರಿಯರು ಎಂದರೆ ಇನ್ನೂ ಋತುಮತಿಯಾಗದ ದೈವ ಸ್ಪರೂಪಿ ಹೆಣ್ಣು ಮಗಳು. ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಅದೇ ರೀತಿ ಬೇರೆ ಬೇರೆ ದೇಶಗಳಲ್ಲೂ ಅಲ್ಲಿನ ಆಚಾರ, ವಿಚಾರಗಳು ಭಿನ್ನವಾಗಿರುತ್ತದೆ. ಅಂತಹದೇ ಒಂದು ಭಿನ್ನ ಆಚರಣೆಯೇ ನೇಪಾಳದ ಜೀವಂತ ದೇವತೆಗಳು. ಆಚರಣೆ, ಪೂಜೆ ದೇವರ ರೂಪ ಯಾವುದು ಬೇಕಾದರೂ ಬದಲಾಗಬಹುದು. ಆದರೆ, ಎಲ್ಲರೊಳಗಡೆ ಇರುವು...