Bengaluru, ಜನವರಿ 30 -- Paru Parvathi Movie: ಕನ್ನಡಿಗರಿಗೆ ಬೆರಳ ತುದಿಯಲ್ಲಿಯೇ ಜಗತ್ತು ತೋರಿಸುತ್ತಿದ್ದಾರೆ ಡಾ. ಬ್ರೋ ಅಲಿಯಾಸ್ ಗಗನ್‌ ಶ್ರೀನಿವಾಸ್.‌ ಈಗಾಗಲೇ 25ಕ್ಕೂ ಹೆಚ್ಚು ದೇಶಗಳಿಗೆ ತೆರಳಿರುವ ಗಗನ್, ಇತ್ತೀಚೆಗಷ್ಟೇ ನೇಪಾಳಕ್ಕೆ ತೆರಳಿ ಅಲ್ಲಿನ ಜನ, ಜೀವನದ ಜತೆಗೆ ಬದುಕು ಬವಣೆಯನ್ನೂ ನೋಡುಗರತ್ತ ದಾಟಿಸಿದ್ದರು. ಹೀಗೆ ಸುತ್ತಾಟದ ನಡುವೆಯೇ, ಈಗ ಸಣ್ಣ ಗ್ಯಾಪ್‌ನಲ್ಲಿ ಮೊದಲ ಸಲ ಸಿನಿಮಾ ಪ್ರಚಾರದ ಕಡೆ ಹೊರಳಿದ್ದಾರೆ ಡಾ. ಬ್ರೋ. ಹಾಗಂತ ಸಿನಿಮಾದಲ್ಲಿ ನಟಿಸಿದ್ದಾರಾ ಎಂದಲ್ಲ. ಬದಲಿಗೆ ನಾಳೆ ತೆರೆಕಾಣಲಿರುವ ಪಾರು ಪಾರ್ವತಿ ಚಿತ್ರಕ್ಕೆ ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ.

ಏಟೀನ್‌ ಥರ್ಟಿ ಸಿಕ್ಸ್‌ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಪಿ.ಬಿ. ಪ್ರೇಂನಾಥ್ ನಿರ್ಮಿಸಿರುವ ಸಿನಿಮಾ "#ಪಾರು ಪಾರ್ವತಿ". ರೋಹಿತ್ ಕೀರ್ತಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇವರ ಜತೆಗೆ ಪೂನಂ ಸರ್‌ನಾಯಕ್ ಹಾಗೂ ಫವಾಜ್ ಅಶ್ರಫ್ ಸಹ ಪ್ರಮುಖಪಾತ್ರದಲ್ಲಿ...