ಭಾರತ, ಜನವರಿ 27 -- ನಿಮ್ಮ‌ಮೊಬೈಲ್‌ನಲ್ಲಿ ಯಾವುದೋ ದ್ವೇಷ ಅಥವಾ ಯಾರದ್ದೋ ಕೊಲೆ, ಅಪಘಾತ ಅಥವಾ ಇನ್ಯಾರದ್ದೋ ಹೃದಯ ವಿದ್ರಾವಕ ಘಟನೆಗಳಂತಹ ನೆಗೆಟಿವ್ ಸುದ್ದಿಗಳ ನೋಟಿಫಿಕೇಶನ್ ಬರುತ್ತಲೇ ಇರುತ್ತದೆ. ನೀವು ಅವುಗಳನ್ನು ನೋಡುತ್ತಲೇ‌ ಇರುತ್ತೀರಿ, ಕೆಲವೊಮ್ಮೆ ಮೊಬೈಲಿನಲ್ಲಿ ನಿಮಗೆ ಸಂಬಂಧವೇ ಇರದ, ಉಪಯೋಗವೂ ಆಗದ ಸೋಷಿಯಲ್ ಮೀಡಿಯಾ ಮೆಸೇಜುಗಳನ್ನೋ ಅಥವಾ ರೀಲ್‌ಗಳನ್ನೋ ಸತತವಾಗಿ ಸ್ಕ್ರಾಲ್ ಮಾಡುತ್ತಲೇ ‌ಇರುತ್ತೀರಿ. ಈ ಸಮಯದಲ್ಲಿ ಯಾರೋ ನಿಮಗೆ ಮಧ್ಯೆ ಅಡಚಣೆ ಮಾಡಿ ಏನೋ ಕೇಳಿದಾಗ ಒಳಗೊಳಗೇ ‌ಅಸಮಧಾನಗೊಳ್ಳುತೀರಿ. ಅಥವಾ ಇದ್ದಕ್ಕಿದ್ದಂತೆ ಸಿಡುಕುತ್ತೀರಿ. ಸತತವಾಗಿ ಈ ನೆಗೆಟಿವ್ ಅಥವಾ ನಿರುಪಯೋಗಿ ವಿಡಿಯೊ ಅಥವಾ ಸುದ್ದಿ ನೋಡಿದ ಮೇಲೆ ಇದ್ದಕ್ಕಿದ್ದ ಹಾಗೆಯೇ ನಿಮ್ಮನ್ನು ಒಂದು ನಿರಾಸಕ್ತಿಯೋ ಅಥವಾ ಅವ್ಯಕ್ತ ಆತಂಕವೋ ಅಥವಾ ಖಿನ್ನತೆಯೋ ಆವರಿಸುತ್ತದೆ. ಈ ಎಲ್ಲ ಅನುಭವಗಳೂ ನಿಮಗಾಗಿದ್ದಲ್ಲಿ ನೀವು ಡೂಮ್‌ಸರ್ಫಿಂಗ್‌ ಅಥವಾ ಡೂಮ್‌ಸ್ಕ್ರಾಲಿಂಗ್‌‌ ಎಂಬ ಮಾನಸಿಕ ಪರಿಣಾಮಕ್ಕೆ ಒಳಗಾಗಿದ್ದೀರಿ ಎಂದು ಅರ್ಥ. ಕೋವಿಡ್ ಸಮಯದಲ್ಲಿ‌ ಉದ...