Chennai, ಮಾರ್ಚ್ 22 -- DK Shivakumar: ನೋಡ್ರೀ ನನ್ನನ್ನು ದೆಹಲಿಯ ತಿಹಾರ್‌ ಜೈಲಿಗೆ ಹಾಕಿದರೂ ನಾನು ಜಗ್ಗುವವನಲ್ಲ.ಬಗ್ಗುವವನೂ ಅಲ್ಲ. ನಮ್ಮ ಹೋರಾಟ ಇದ್ದೇ ಇರುತ್ತದೆ. ಬಿಜೆಪಿಯವರು ನಾನು ಬಂದಾಗ ಕಪ್ಪು ಬಾವುಟ, ಕಪ್ಪು ಅಂಗಿ ಧರಿಸಿ ನನ್ನ ವಿರುದ್ದ ಹಾಗೂ ನಾವು ನಡೆಸುತ್ತಿರುವ ಸಭೆಗಳ ವಿರುದ್ದ ಪ್ರತಿಭಟನೆ ಮಾಡಿರಬಹುದು. ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಆದರೆ ನಮ್ಮ ಹೋರಾಟವನ್ನು ನಿಲ್ಲಿಸಲು ಆಗುವುದಿಲ್ಲ. ನನ್ನನ್ನು ಜೈಲಿಗೆ ಹಾಕಿದರೂ ಸರಿಯೇ ಹೋರಾಟ ಮಾಡುತ್ತೇವೆ. ಇದು ಚೆನ್ನೈ ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಬಿಜೆಪಿಯಿಂದ ಹೋರಾಟ ಎದುರಿಸಿದಾಗ ಕರ್ನಾಟಕದ ಡಿಸಿಎಂ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ನೀಡಿದ ಉತ್ತರ.

ಕೇಂದ್ರ ಸರ್ಕಾರವು ಭಾರತದಲ್ಲಿನ ಲೋಕಸಭೆ ಕ್ಷೇತ್ರಗಳ ಪುನರ್‌ವಿಂಗಡನೆ ನಡೆಸಲಿದ್ದು, ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ದನಿ ಎತ್ತಿದೆ. ಇದಕ್ಕೆ ಪೂರಕವಾಗಿ ದಕ್ಷಿಣ ಹಾಗೂ ಉತ್ತರ...