ಭಾರತ, ಮಾರ್ಚ್ 2 -- 16th Bengaluru film festival: ಮಾರ್ಚ್ 1ರಿಂದ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಿದೆ. ಆದರೆ, ಚಿತ್ರೋತ್ಸವದಲ್ಲಿ ಚಿತ್ರರಂಗದವರೇ ಭಾಗಿಯಾಗಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದರು. ಗೈರಾಗಿರುವ ಚಿತ್ರರಂಗದವರ ಕುರಿತು ಬಹಿರಂಗವಾಗಿ ವಾರ್ನಿಂಗ್ ನೀಡಿದ್ದರು. ನಮಗೂ ಗೊತ್ತಿದೆ ಯಾರ್ಯಾರಿಗೆ, ಎಲ್ಲೆಲ್ಲಿ ನಟ್ಟು ಬೋಲ್ಟ್‌ ಟೈಟ್ ಮಾಡಬೇಕು ಅಂತ ಎಂದಿದ್ದರು. ಅದೇ ವಿಚಾರವಾಗಿ ನಂತರ ಮಾತನಾಡಿದ್ದ ಪ್ರತಿಪಕ್ಷ ನಾಯಕ ಆರ್ ಅಶೋಕ್, "ಡಿ.ಕೆ ಶಿವಕುಮಾರ್ ಅವರು ಹಾಗೆ ಹೇಳುವಂತಿಲ್ಲ. ಚಿತ್ರರಂಗದವರಿಗೆ ವಿವೇಚನೆ ಇದೆ" ಎಂದಿದ್ದರು. ಈಗ ಅದೇ ವಿಚಾರವಾಗಿ ಮತ್ತೆ ಡಿಸಿಎಂ ಮಾತನಾಡಿದ್ದಾರೆ. "ಯಾರು ಏನೇ ಅಂದ್ರು ನಾನು ಕಂಡಿರುವ ಸತ್ಯವನ್ನು ಹೇಳದೇ ಇರಲು ಸಾಧ್ಯವಿಲ್ಲ" ಎಂದಿದ್ದಾರೆ.

ಸಿನಿಮಾದವರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ನನಗೆ ಗೊತ್ತಿರುವ ಸತ್ಯವನ್ನು ಹೇಳಿದ್ದೇನೆ. ಅವರು ಪ್ರತಿಭಟನೆ ಮಾಡಲಿ, ಹೋರಾಟ ಮಾಡಲಿ. ನಮ್ಮ ನೀರು, ನಮ್ಮ ಹಕ್ಕು. ಅವರು ಯಾವಾಗಲೂ ನೆಲ, ಜಲದ ವಿಚ...