Bengaluru, ಮಾರ್ಚ್ 28 -- ಒಂದು ಕಾಲದಲ್ಲಿ ತೀರಾ ಅಪರೂಪ ಮತ್ತು ಡಿವೋರ್ಸ್ ಎಂಬ ಪದವನ್ನು ಕೇಳಿದರೆ ಸಾಕು, ಜನರು ಬೆಚ್ಚಿಬೀಳುತ್ತಿದ್ದರು. ಆದರೆ ಈಗ ಹಾಗಿಲ್ಲ, ಮದುವೆಯಾಗಿ ಒಂದೆರಡು ತಿಂಗಳಿಗೆಲ್ಲಾ ವಿಚ್ಚೇದನ ಎನ್ನುವುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಬದಲಾದ ಕುಟುಂಬ ವ್ಯವಸ್ಥೆ ಮತ್ತು ಪದ್ಧತಿಗಳು, ಜನರ ಆದ್ಯತೆಗಳು ಇಂದು ವಿವಾಹ ವಿಚ್ಚೇದನ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿವೆ. ಹಿಂದಿನ ಕಾಲದಲ್ಲಿ ಇದ್ದಂತಹ ಹೊಂದಾಣಿಕೆ, ತ್ಯಾಗ ಎನ್ನುವ ಪರಿಕಲ್ಪನೆಗಳು ಇಂದು ದಂಪತಿಯಲ್ಲಿ ಕಾಣುತ್ತಿಲ್ಲ. ಶಿಕ್ಷಣ, ಉದ್ಯೋಗ ಮತ್ತು ಹಣಕಾಸಿನ ಸ್ವಾತಂತ್ರ್ಯದಿಂದಾಗಿ ಇಂದು ಜನರು ಬೇಗನೇ ನಿರ್ಧಾರ ಕೈಗೊಳ್ಳುತ್ತಾರೆ ಮತ್ತು ಇಷ್ಟವಿಲ್ಲದ ಕಡೆ ಮತ್ತೆ ಹೊಂದಿಕೊಂಡು ಇರಲು ಇಷ್ಟಪಡುವುದಿಲ್ಲ.

ಸಾಮಾನ್ಯವಾಗಿ ಮದುವೆಯನ್ನು ಜೀವನಪರ್ಯಂತದ ಬದ್ಧತೆಯಾಗಿ ನೋಡಲಾಗುತ್ತದೆ. ಆದರೆ ದಶಕಗಳನ್ನು ಜೊತೆಯಾಗಿ ಕಳೆದ ದಂಪತಿಗಳು, ನೋವು ನಲಿವನ್ನು ಪರಸ್ಪರ ಹಂಚಿಕೊಂಡ ಸಂಗಾತಿಗಳು ಸಹ ವಿಚ್ಛೇದನ ಪಡೆಯುತ್ತಿರುವುದು ಈ ದಿನಗಳಲ್ಲಿ ಹೆಚ್ಚಾಗಿದೆ. ಇದು ಸ್...