Bengaluru, ಫೆಬ್ರವರಿ 23 -- ಮನೆ ಮತ್ತು ಆಫೀಸ್‌ನಲ್ಲಿ ಎಸಿ ಈಗಾಗಲೇ ಸದ್ದು ಮಾಡಲಾರಂಭಿಸಿದೆ. ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪ ಏರಿಕೆಯಾಗುತ್ತಿರುವ ಕಾರಣಕ್ಕೆ ಜನರು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಫ್ಯಾನ್, ಕೂಲರ್ ಸಾಕಾಗುವುದಿಲ್ಲ ಎಂದು ಎಸಿ ಅಳವಡಿಸಿಕೊಂಡಿರುತ್ತಾರೆ. ಎಸಿ ಅಂದರೆ, ಹವಾನಿಯಂತ್ರಣ ಬಳಕೆಯಿಂದ ನಮಗೆ ಹಲವು ರೀತಿಯ ಪ್ರಯೋಜನಗಳಿವೆ. ಅದರ ಜತೆಗೇ, ದಿನನಿತ್ಯ ಹೆಚ್ಚಿನ ಸಮಯ ಎಸಿಗೆ ಒಡ್ಡಿಕೊಳ್ಳುವುದರಿಂದ, ಮತ್ತು ದಿನಪೂರ್ತಿ ಹೆಚ್ಚಿನ ಸಮಯವನ್ನು ಎಸಿ ಗಾಳಿಯಲ್ಲಿಯೇ ಕಳೆಯುವುದರಿಂದ ಹಲವು ಸಮಸ್ಯೆಗಳು ನಮಗೆ ಬರಬಹುದು. ಹೀಗಾಗಿ ಎಸಿ ಗಾಳಿ ಎಷ್ಟು ಪ್ರಯೋಜನಕಾರಿಯೋ, ಅದರಿಂದ ಅಷ್ಟೇ ಅನಾನುಕೂಲಗಳು ಕೂಡ ಇವೆ ಎನ್ನುವುದನ್ನು ತಿಳಿದುಕೊಳ್ಳಬೇಕು.

ಯಾವುದೇ ತಂತ್ರಜ್ಞಾನ ಮತ್ತು ಸೌಲಭ್ಯಗಳು ನಮ್ಮ ಜೀವನಕ್ಕೆ ಸಹಕರಿಸಲು ಅನ್ವೇಷಣೆಯಾಗಿದ್ದರೂ, ಅದರಿಂದ ಮುಂದೆ ಕೆಲವೊಂದು ರೀತಿಯ ಸಮಸ್ಯೆಗಳು ಕೂಡ ಎದುರಾಗಬಹುದು. ಹೀಗಾಗಿ ಅವುಗಳನ್ನು ಅರಿತುಕೊಂಡು, ಅದರ ಮಿತಿಯ ಬಗ್ಗೆ ಬಗ್ಗೆ ಕೂಡ ತಿಳಿದುಕೊಂಡರೆ ಎಚ್ಚರಿಕೆ ವಹಿ...