Bangalore, ಫೆಬ್ರವರಿ 18 -- Digital arrest cyber crime: ಯಾದಗಿರಿ ಜಿಲ್ಲೆಯ ನಿವೃತ್ತ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಮಹಿಳಾ ಅಧಿಕಾರಿಯೊಬ್ಬರು ಡಿಜಿಟಲ್‌ ಅರೆಸ್ಟ್‌ ಸೈಬರ್‌ ಕ್ರೈಮ್‌ಗೆ ಒಳಗಾಗಿ ಹತ್ತು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಯಾದಗಿರಿಯ ಭೀಮರಾಯನಗುಡಿ ಯುಕೆಪಿ ಕ್ಯಾಂಪ್‌ನಲ್ಲಿ ವಾಸವಗಿರುವ ಕೆಬಿಜೆಎನ್‌ಎಲ್‌ನ ನಿವೃತ್ತ ಅಧಿಕಾರಿ ಸೈಬರ್‌ ಅಪರಾಧಿಗಳ ಮೋಸದಾಟಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ.

ಯಾದಗಿರಿ ಜಿಲ್ಲೆಯ ಈ ನಿವೃತ್ತ ಮಹಿಳಾ ಅಧಿಕಾರಿಯು ಸಹೋದರಿಯ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ ಎಂದು ಪ್ರಜಾವಾಣಿ ಪತ್ರಿಕೆಯ ವರದಿ ತಿಳಿಸಿದೆ. ಇವರು ತನ್ನ ಸಹೋದರಿ ಮನೆಯಲ್ಲಿದ್ದಾಗ ವಿಡಿಯೋ ಕರೆ ಬಂದಿದೆ. ಮಧ್ಯಾಹ್ನ 12:30 ಗಂಟೆಗೆ ಕರೆ ಮಾಡಿದ ವ್ಯಕ್ತಿಯು ಹಿಂದಿಯಲ್ಲಿ "ತಾನು ಮುಂಬೈನ ಕ್ರೈಂ ಬ್ರಾಂಚ್‌ ಅಧಿಕಾರಿ" ಎಂದು ತನ್ನನ್ನು ಪರಿಚಯಿಸಿಕೊಡಿದ್ದ ಎಂದು ವರದಿ ತಿಳಿಸಿದೆ.

ಈ ಸಮಯದಲ್ಲಿ ಆ ನಕಲಿ ಕ್ರೈಂ ಬ್ರಾಂಚ್‌ ಅಧಿಕಾರಿಯು ಇವರನ್ನು ಭಯಪಡಿಸಿದ್ದಾನೆ. "ನಿಮ್ಮ ಮೇಲೆ ಮನಿ ಲ್ಯಾಂಡರಿಂಗ್‌...