ಭಾರತ, ಮಾರ್ಚ್ 13 -- ಭಾರತದಲ್ಲಿ ಪ್ರಸ್ತುತ 101 ಮಿಲಿಯನ್‌ಗಿಂತಲೂ ಹೆಚ್ಚು ಜನ ಮಧುಮೇಹ ಹೊಂದಿದ್ದಾರೆ ಎಂಬುದಾಗಿ ಲೆಕ್ಕಾಚಾರ ಹೇಳುತ್ತದೆ. 2045ರ ವೇಳೆಗೆ ಈ ಸಂಖ್ಯೆ 125 ಮಿಲಿಯನ್‌ಗೆ ಏರಬಹುದು ಎಂದೂ ಅಂದಾಜಿಸಲಾಗಿದೆ. ಮಧುಮೇಹದಿಂದ ಅನೇಕ ಇತರ ಸಮಸ್ಯೆಗಳೂ ಉಂಟಾಗುತ್ತವೆ. ಹೃದಯ ರೋಗ, ಮೂತ್ರಪಿಂಡ ಕಾಯಿಲೆ ಮತ್ತು ಡಯಾಬಿಟಿಕ್ ರೆಟಿನೊಪತಿ (ಡಿಆರ್) ನಂತಹ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಕೆಲವು ಸಮಸ್ಯೆಗಳು ರೋಗಲಕ್ಷಣಗಳನ್ನು ತೋರಿಸುತ್ತವೆ. ಆದರೆ ಡಯಾಬಿಟಿಕ್ ರೆಟಿನೊಪತಿ ಅಥವಾ ಡಿಆರ್ ಲಕ್ಷಣ ತೋರಿಸುವುದಿಲ್ಲ ಎಂಬುದು ಆತಂಕಕಾರಿ ಸಂಗತಿಯಾಗಿದೆ.

ಡಿಆರ್ ಅಥವಾ ಡಯಾಬಿಟಿಕ್ ರೆಟಿನೊಪತಿ ಎಂಬುದು ಕಣ್ಣಿಗೆ ಹಾನಿ ಉಂಟು ಮಾಡುವ ಸಮಸ್ಯೆಯಾಗಿದ್ದು, ಈ ಸಮಸ್ಯೆ ಗೊತ್ತೇ ಆಗದಂತೆ ಕಾಡಲು ಆರಂಭಿಸುತ್ತದೆ. ಇದರಿಂದ ಕಣ್ಣಿನ ದೃಷ್ಟಿ ಕಡಿಮೆಯಾಗಿ, ಕೆಲವೊಮ್ಮೆ ಕುರುಡುತನವೂ ಉಂಟಾಗಬಹುದಾಗಿದೆ. ಮಧ್ಯವಯಸ್ಸಿನ ಹಲವರು ದೃಷ್ಟಿ ಕಳೆದುಕೊಳ್ಳಲು ಇದೇ ಪ್ರಮುಖ ಕಾರಣವಾಗಿದೆ.

ಭಾರತದ ಹಲವು ರಾಜ್ಯಗಳಲ್ಲಿ ಮತ್ತು ಒಂದು ಕೇಂದ್ರಾಡಳ...