ಭಾರತ, ಫೆಬ್ರವರಿ 2 -- ಒತ್ತಡವು ಇತ್ತೀಚಿನ ಜೀವನಶೈಲಿಯ ಭಾಗವಾಗಿದೆ. ಅತಿಯಾದ ಒತ್ತಡವು ರಕ್ತದಲ್ಲಿನ ಸಕ್ಕರೆಯ ನಿಯಂತ್ರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದನ್ನು ನಿಭಾಯಿಸುವ ಕಾರ್ಯವಿಧಾನವಾಗಿ ಜನರು ಅಧಿಕ ಕ್ಯಾಲೋರಿ ಹೊಂದಿರುವ ಆಹಾರವನ್ನು ಸೇವಿಸುತ್ತಾರೆ. ಇದರಿಂದ ಇನ್ನಷ್ಟು ಸಮಸ್ಯೆಗಳು ಎದುರಾಗಬಹುದು. ಒತ್ತಡ ಹೆಚ್ಚಾದಷ್ಟೂ ಸಕ್ಕರೆಯ ಮಟ್ಟದಲ್ಲಿ ಏರಿಕೆಯಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.

ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ವಾಶಿಯ ಫೋರ್ಟಿಸ್ ಹಿರಾನಂದಾನಿ ಆಸ್ಪತ್ರೆಯ ಮನೋವೈದ್ಯ ಡಾ. ಕೇದಾರ್ ಟಿಲ್ವೆ 'ರೋಗಿಗಳಲ್ಲಿ ಒತ್ತಡದ ಪ್ರಮಾಣ ಹೆಚ್ಚಿದಾಗ ಔಷಧಿಗಳನ್ನು ತಪ್ಪಿಸುವ ಸಾಧ್ಯತೆ ಹೆಚ್ಚು. ಇದು ಅವರ ಸಕ್ಕರೆ ಮಟ್ಟದಲ್ಲಿ ತೀವ್ರ ಏರಿಳಿತಕ್ಕೆ ಕಾರಣವಾಗುತ್ತದೆ. ಇಂತಹ ವ್ಯಕ್ತಿಗಳು ಒತ್ತಡದಲ್ಲಿರುವಾಗ ಗಮನವಿಲ್ಲದಂತೆ ಇರುತ್ತಾರೆ, ಇದರಿಂದ ಅವರಿಗೇ ಅರಿಯದಂತೆ ಹೆಚ್ಚುವರಿ ಔಷಧಿಗಳನ್ನು ಅಥವಾ ಅನುಚಿತ ಡೋಸೇಜ್ ಅನ್ನು ತೆಗೆದುಕೊಳ್ಳುವ...