ಭಾರತ, ಮಾರ್ಚ್ 14 -- Diabetes Symptoms While Walking: ಮಧುಮೇಹವು ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಅಸಮತೋಲನದಿಂದ ಉಂಟಾಗುವ ಆರೋಗ್ಯ ಸಮಸ್ಯೆಯಾಗಿದೆ. ಇದು ಜೀವನಪರ್ಯಂತ ಇರುವ ಕಾಯಿಲೆ. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದ್ದರಿಂದ ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಅವಶ್ಯಕತೆಯಿದೆ. ನಾವು ಔಷಧಿಗಳಿಂದ ಈ ರೋಗವನ್ನು ನಿಯಂತ್ರಿಸಬಹುದು. ಆದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ.

ಮಧುಮೇಹವು ದೇಹದ ಮೇಲೆ ನಿಧಾನವಾಗಿ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಆರಂಭಿಕ ಹಂತಗಳಲ್ಲಿ, ಲಕ್ಷಣಗಳು ತುಂಬಾ ಸೌಮ್ಯವಾಗಿರುತ್ತವೆ. ಆದಾಗ್ಯೂ, ನೀವು ಈ ಲಕ್ಷಣಗಳನ್ನು ಆರಂಭಿಕ ಹಂತಗಳಲ್ಲಿ ಗಮನಿಸಿದರೆ, ರೋಗವು ಮುಂದುವರಿಯುವ ಮೊದಲು ನೀವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು. ರನ್ನಿಂಗ್ ಅಥವಾ ವಾಕಿಂಗ್ ಮಾಡುವಾಗ ಕಾಣಿಸುವ ಈ ಕೆಲವು ಲಕ್ಷಣಗಳು ಮಧುಮೇಹದ ಸೂಚಕವಾಗಿರಬಹುದು. ವಾಕಿಂಗ್ ಮಾಡುವಾಗ ಕಾಣಿಸುವ ಮಧುಮೇಹದ ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡದಿರಿ.

ಮಧುಮೇಹದ ಆರಂಭಿಕ ಹಂತದಲ್ಲಿರುವ ಜನರು...