ಭಾರತ, ಫೆಬ್ರವರಿ 23 -- ಭಾರತದಲ್ಲಿ ಮಧುಮೇಹವು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈ ಸಮಯದಲ್ಲಿ ಜನರು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸುವತ್ತ ಗಮನ ಕೊಡುವುದು ಬಹಳ ಮುಖ್ಯವಾಗುತ್ತದೆ. ಈಗಾಗಲೇ ಲಕ್ಷಾಂತರ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ, ಕೆಲವರಿಗೆ ರೋಗನಿರ್ಣಯ ಮಾಡಲು ಸಾಧ್ಯವಾಗುತ್ತಿಲ್ಲ.

ಜಡ ಜೀವನಶೈಲಿಯು ಮಧುಮೇಹದ ಸಮಸ್ಯೆ ದಿನೇ ದಿನೇ ಏರಿಕೆಯಾಗಲು ಕಾರಣವಾಗುತ್ತಿದೆ. ಇದರೊಂದಿಗೆ ಸಕ್ಕರೆ ಕಾಯಿಲೆಯ ಬಗ್ಗೆ ಜನರಲ್ಲಿ ಅರಿವಿನ ಕೊರತೆಯೂ ಇದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗುವುದು ಟೈಪ್ 1 ಹಾಗೂ ಟೈಪ್ 2 ಮಧುಮೇಹಕ್ಕೆ ಕಾರಣವಾಗಬಹುದು. ಹಾಗಾಗಿ ಮಧುಮೇಹದ ಆರಂಭಿಕ ಲಕ್ಷಣಗಳನ್ನು ಗುರುತಿಸಬೇಕಿದೆ.

ಡಯಾಬಿಟಿಕ್ ನ್ಯುರೋಪತಿ ಇದು ದೇಹದಲ್ಲಿ ಗ್ಲುಕೋಸ್ ಪ್ರಮಾಣ ಏರಿದಾಗ ದೇಹದ ನರಗಳಿಗೆ ಹಾನಿ ಮಾಡುವ ಸ್ಥಿತಿಯನ್ನು ಸೂಚಿಸುತ್ತದೆ. ಹಾನಿಗೊಳಗಾದ ನರಗಳನ್ನು ಅವಲಂಬಿಸಿ, ಕೈ ಅಥವಾ ಕಾಲುಗಳಲ್ಲಿ, ವಿಭಿನ್ನ ಸಂಕೇತಗಳು, ಲಕ್ಷಣಗಳು ಗೋಚರವಾಗುತ್ತವೆ. ಕೈಕಾಲುಗಳಲ್ಲಿ ಗೋಚರಿಸುವ ಮಧುಮೇಹದ ಆರಂಭಿಕ ...