Bengaluru, ಮಾರ್ಚ್ 28 -- ವಿಶ್ವ ಆರೋಗ್ಯ ಸಂಸ್ಥೆ 2025ರ ವರದಿಯ ಪ್ರಕಾರ ಭಾರತದಲ್ಲಿ 100 ಕೋಟಿ ಅಧಿಕ ಮಂದಿ ಡಯಾಬಿಟಿಸ್ ಅಥವಾ ಮಧುಮೇಹದಿಂದ ಬಳಸುತ್ತಿದ್ದಾರೆ. ಇದೊಂದು ಗುಣಪಡಿಸಲಾಗದ ಕಾಯಿಲೆಯಾದ ಕಾರಣ ಇದರ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಡಯಾಬಿಟಿಸ್ ಆರಂಭಿಕ ರೋಗಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಸಾಮಾನ್ಯ ಲಕ್ಷಣಗಳು ಹೊರತು ಪಡಿಸಿಯೂ ಡಯಾಬಿಟಿಸ್‌ನ ಕೆಲವು ಅಸಮಾನ್ಯ ಲಕ್ಷಣಗಳಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಚರ್ಮದಲ್ಲಿನ ಬದಲಾವಣೆ ನಮ್ಮ ಚರ್ಮವು ದೇಹದೊಳಗೆ ಏನು ನಡೆಯುತ್ತಿದೆ ಎಂಬುದನ್ನು ಸೂಚಿಸುವ ಅಂಗಾಂಶವಾಗಿದೆ. ಮಧುಮೇಹದ ಲಕ್ಷಣಗಳು ಕೂಡ ಚರ್ಮದಲ್ಲಿ ಕಾಣಿಸುತ್ತವೆ. ಮಧುಮೇಹ ಬರುವ ಆರಂಭದಲ್ಲಿ ಕುತ್ತಿಗೆ, ಕಂಕುಳ ಸುತ್ತಲೂ, ತೊಡೆಸಂಧಿಗಳಲ್ಲಿ ಚರ್ಮ ಕಪ್ಪಾಗುತ್ತದೆ. ವಿಶೇಷವಾಗಿ ಚರ್ಮ ಮಡಿಕೆಯಾಗುವ ಭಾಗದಲ್ಲಿ ಬದಲಾವಣೆ ಉಂಟಾದರೆ ಇದನ್ನು ನಿರ್ಲಕ್ಷ್ಯ ಮಾಡದಿರಿ.

ಪದೇ ಪದೇ ಸೋಂಕಿಗೆ ಒಳಗಾಗುವುದು ನೀವು ಪದೇ ಪದೇ ಸೋಂಕಿಗೆ ಒಳಗಾದರೆ ಇದು ಮಧುಮೇಹದ ಸೂಚಕವಾಗಿರಬಹುದು. ಗುಕ್...