ಭಾರತ, ನವೆಂಬರ್ 25 -- ಕತಾರ್: ಬ್ರೆಜಿಲ್ ಫಿಫಾ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಿದೆ. ಸೆರ್ಬಿಯಾ ವಿರುದ್ಧದ ಈ ಪಂದ್ಯದಲ್ಲಿ ಬ್ರೆಜಿಲ್ 2-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತ್ತು.

ರಿಚರ್ಲಿಸನ್‌ ಅಮೋಘ ಎರಡು ಗೋಲುಗಳೊಂದಿಗೆ ಬ್ರೆಜಿಲ್ ಭರ್ಜರಿ ಜಯ ಸಾಧಿಸಿತು. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಎಂ.ಎಸ್. ಧೋನಿ ವಿಶೇಷ ಆಕರ್ಷಣೆಯಾಗಿದ್ದರು. ಅಂದರೆ ಎಂಎಸ್ ಡಿ ಖುದ್ದು ಕ್ರೀಡಾಂಗಣಕ್ಕೆ ಬಂದಿರಲಿಲ್ಲ.

ಜಗತ್ತಿನ ಯಾವ ಮೂಲೆಗೆ ಹೋದರೂ ಎಂ.ಎಸ್.ಧೋನಿ ಅವರ ಅಭಿಮಾನಿಯೊಬ್ಬರು ಇದ್ದೇ ಇರುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಯೊಬ್ಬರು ಧೋನಿಯ ಜೆರ್ಸಿಯೊಂದಿಗೆ ಬ್ರೆಜಿಲ್-ಸೆರ್ಬಿಯಾ ಪಂದ್ಯದ ವೇಳೆ ಕಾಣಿಸಿಕೊಂಡಿದ್ದರು. ಬ್ರೆಜಿಲ್ ಅಭಿಮಾನಿಯೊಂದಿಗೆ ಧೋನಿಯ ಜೆರ್ಸಿಯನ್ನು ಕ್ರೀಡಾಂಗಣದಲ್ಲಿ ಪ್ರದರ್ಶಿಸಿದ್ದಾರೆ.

ಬ್ರೆಜಿಲ್ ತಂಡದ ಜೆರ್ಸಿ ಕೂಡ ಹಳದಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿ ಬಣ್ಣ ಕೂಡ ಹಳದಿಯಾಗಿದ್ದು, ಜೆರ್ಸಿಗಳು ಹ...