Dharwad, ಫೆಬ್ರವರಿ 9 -- ಧಾರವಾಡ: ಧಾರವಾಡ ನಗರದ ಮಾಳಮಡ್ಡಿಯಲ್ಲಿ ಶನಿವಾರ ಹಾಡಹಗಲೇ ವೈದ್ಯ ಡಾ. ಆನಂದ ಕಬ್ಬೂರ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 24 ಗಂಟೆಗಳೊಳಗೆ ಮೂವರು ಕುಖ್ಯಾತ ಅಂತರ ಜಿಲ್ಲಾ ಕಳ್ಳರನ್ನು ಹುಬ್ಬಳ್ಳಿ ಧಾರವಾಡ ಪೊಲೀಸರು ಬಂಧಿಸಿದ್ದಾರೆ. ಧಾರವಾಡದ ಹೊಸ ಯಲ್ಲಾಪುರದ ಅಶೋಕ ಹೊಸಮನಿ, ಶಿವುಕುಮಾರ ಕೋಕಾಟಿ, ಶಿವಾನಂದ ಕರಡಿಗುಡ್ಡ ಇವರೇ ಬಂಧಿಸಲ್ಪಟ್ಟವರಾಗಿದ್ದು, ಇವರಿಂದ 3 ಬೈಕ್, 2 ಮೊಬೈಲ್, ಬಂಗಾರದ ಆಭರಣ ವಶಕ್ಕೆ ಪಡೆಯಲಾಗಿದೆ. ಪ್ರಕರಣ ನಡೆದ ಬಳಿಕ ಸಿಸಿ ಕ್ಯಾಮರಾ ಸಹಾಯದಿಂದ ಕಳ್ಳರ ಗುರುತು ಪತ್ತೆಯಾಗಿತ್ತು. ಅದರ ಆಧಾರದಲ್ಲಿ ತನಿಖೆ ನಡೆಸಿ ರಾಯಾಪುರ ಬಳಿ ಬಂಧಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದ್ದಾರೆ.

ಘಟನೆ ಬೆಳಕಿಗೆ ಬಂದ ಕೂಡಲೇ ಎಸಿಪಿ ಪ್ರಶಾಂತ ಸಿದ್ದನಗೌಡರ, ಸಿಪಿಐ ಸಂಗಮೇಶ ದಿಡಿಗಿನಾಳ ಹಾಗೂ ಇತರ ಇನ್ಸಪೆಕ್ಟರ್ ಒಳಗೊಂಡ ತಂಡ ರಚಿಸಿಲಾಗಿತ್ತು. ಮಾಳಮಡ್ಡಿಯ ಡಾ.ಆನಂದ ಕಬ್ಬೂರ ಎಂಬುವವರ ಮನೆಗೆ ನುಗ್ಗಿದ ...