Dharwad, ಫೆಬ್ರವರಿ 9 -- ಧಾರವಾಡ: ಧಾರವಾಡ ತಾಲೂಕಿನ ಕಲಕೇರಿ ಬಳಿ ಸಂಭವಿಸಿದ ಕ್ರೂಸರ್ ಅಪಘಾತದಲ್ಲಿ ಮೂವರು ಅಸು ನೀಗಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕಿಮ್ಸ್‌ಗೆ ದಾಖಲಾದವರ ಪೈಕಿ ಶಾಂತವ್ವ ಕಲ್ಲಪ್ಪ ನೀರಲಕಟ್ಟಿ(74) ಎಂಬ ಮಹಿಳೆ ಶನಿವಾರ ರಾತ್ರಿಯೇ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದರು. ಭಾನುವಾರ ಬೆಳಗಿನ ಜಾವ ಮಂಜುಳಾ ಬಸವಣ್ಣೆಪ್ಪ ಬಮ್ಮಿಗಟ್ಟಿ(54) ಹಾಗೂ ರವಿ ಶೆಟ್ಟೆಪ್ಪ ಮಡಿವಾಳರ (47)ಎಂಬಾತ ಮೃತಪಟ್ಟಿದ್ದಾರೆ. ಇದರಿಂದ ಕ್ರೂಸರ್ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಧಾರವಾಡದ ಕೋಳಿಕೇರಿಯ 15 ಜನರು ಕ್ರೂಸರ್ ನಲ್ಲಿ ಕಲಕೇರಿ ಗ್ರಾಮಕ್ಕೆ ಮಹಿಳೆಯೊಬ್ಬರ ಶವ ಸಂಸ್ಕಾರಕ್ಕೆಂದು ಹೊರಟಿದ್ದರು.ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯಾದ ರಭಸಕ್ಕೆ ಹಲವರಿಗೆ ಗಾಯವಾಗಿ ಮೂವರು ಕೊನೆಯುಸಿರೆಳೆದಿದ್ದಾರೆ.

ಧಾರವಾಡ ತಾಲ್ಲೂಕಿನ ಹೊಸ ಯಲ್ಲಾಪುರದ ಕೋಳಿಕೇರಿಯವರು ಕ್ರೂಸರ್‌ನಲ್ಲಿ ಸಂಬಂಧಿಕರ ಅಂತ್ಯಕ್ರಿಯೆಗೆ ಹೊರಟಿದ್ದರು. ಈ ವೇಳೆ ...