Hubli Dharwad, ಮಾರ್ಚ್ 13 -- ಧಾರವಾಡ: ಧಾರವಾಡ ನಗರದಲ್ಲಿ ಹೋಳಿ ಹಬ್ಬದ ಆಚರಣೆಗೆ ಭರ್ಜರಿ ತಯಾರಿಯೇ ನಡೆದಿದೆ. ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ನಗರಿಯಾಗಿರುವ ಧಾರವಾಡದಲ್ಲಿ ಪ್ರತಿ ವರ್ಷದ ಬಣ್ಣದ ಹಬ್ಬವನ್ನು ಸಡಗರ, ಸಂಭ್ರಮದಿಂದಲೇ ಆಚರಿಸಿಕೊಂಡು ಬರಲಾಗುತ್ತಿದೆ. ಧಾರವಾಡ ನಗರದಲ್ಲಿ 2025ರ ಮಾರ್ಚ್‌ 15 ರಂದು ಆಯೋಜಿಸಲಾಗಿದೆ. ಧಾರವಾಡ ಬಣ್ಣದ ಉತ್ಸವವನ್ನು ಕೆ.ಸಿ.ಡಿ ವೃತ್ತದ ಬದಲು ಕಾಲೇಜು ರಸ್ತೆಯಲ್ಲಿನ ಎಲ್.ಐ.ಸಿ ಬಳಿ ಇರುವ ಎಸ್.ಬಿ.ಐ ವೃತ್ತದಲ್ಲಿ ಆಚರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ನಗರದಲ್ಲಿ ಶಾಸಕ ಅರವಿಂದ ಬೆಲ್ಲದ ಅಭಿಮಾನಿ ಬಳಗ ಧಾರವಾಡ ಬಣ್ಣದ ಉತ್ಸವ ಸಮಿತಿ ವತಿಯಿಂದ ಕಳೆದ ಎರಡು ವರ್ಷಗಳಿಂದ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತ ಬಂದಿದೆ. ಸತತ ಮೂರನೇ ಬಾರಿಗೆ ಮತ್ತೊಂದು ಅದ್ಭುತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಬ್ಬದ ಸಂಭ್ರಮವನ್ನು ಇನ್ನಷ್ಟು ವಿಶೇಷಗೊಳಿಸಲು ಗಡಿಗೆ ಒಡೆಯುವ ಸ್ಪರ್ಧೆ ಹಾಗೂ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ರೇನ್ ಡ್ಯಾನ್ಸ್‌ನ್ನು ನಗರದ ಕೆ.ಸಿ.ಡಿ ವೃತ್...