Dharwad, ಫೆಬ್ರವರಿ 23 -- ಹೆಗಡೆ ಗ್ರುಪ್‌ ಹಾಗೂ ವಿಜನ್‌ ಫೌಂಡೇಶನ್‌ ಆಯೋಜಿಸಿರುವ ಧಾರವಾಡ ಹಬ್ಬ ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಬಿಗ್‌ ಬಾಸ್‌ ಖ್ಯಾತಿಯ ಹಾವೇರಿಯ ಕಲಾವಿದ ವಿಶ್ವನಾಥ ಹಿರೇಮಠ ಅವರ ಕಾರ್ಯಕ್ರಮ ಯುವ ಸಮೂಹವನ್ನು ಸೂರೆಗೊಂಡಿತು.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ರಾಮದುರ್ಗ, ಸೂರಜ್‌ ಮಂಗಳೂರು, ಸೂರ್ಯಾ ಕುಂದಾಪುರ ಹಾಗೂ ದೀಪಿಕಾ ಮಂಡ್ಯ ತಂಡವು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟಿತು.

ಧಾರವಾಡ ಹಬ್ಬದಲ್ಲೊ ವಿವಿಧ ಕಲಾವಿದರು ನೃತ್ಯಗಳನ್ನು ನಡೆಸಿಕೊಟ್ಟು ಹಬ್ಬಕ್ಕೆ ಜೋಶ್‌ ತಂದರು.

ಉತ್ತರ ಕರ್ನಾಟಕದ ಮಲ್ಲಕಂಬ ಸಾಹಸಿಗರು ಸಂಗೀತ ಹಿನ್ನೆಲೆಯೊಂದಿಗೆ ತೋರದ ಮಲ್ಲಕಂಬ ಪ್ರದರ್ಶನ ಗಮನ ಸೆಳೆಯಿತು.

ಧಾರವಾಡ ಹಬ್ಬದಲ್ಲಿ ಸ್ಥಳೀಯ ಕಲಾವಿದರು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮಗಳು ಆಕರ್ಷಕವಾಗಿದ್ದವು.

ಧಾರವಾಡ ಹಬ್ಬ ಬಾಲ ಕಲಾವಿದರೂ ವಿಭಿನ್ನ ರೀತಿಯ ನೃತ್ಯ ಪ್ರದರ್ಶನ ನೀಡಿ ಖುಷಿ ಹೆಚ್ಚಿಸಿದರು.

ಧಾರವಾಡ ಹಬ್ಬದ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ವಿವಿಧ ಕೇತ...