Bangalore, ಮಾರ್ಚ್ 22 -- Dharmsthala News: ಕರ್ನಾಟಕದ ಪ್ರಸಿದ್ದ ಧಾರ್ಮಿಕ ತಾಣವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಅವರ ಕುಟುಂಬವರ ಕುರಿತು ಪ್ರಕಟಿಸಲಾಗಿರುವ ಎಲ್ಲಾ ರೀತಿಯ ವಿವಾದಾತ್ಮಕ ಹಾಗೂ ಮಾನ ಹಾನಿಯಾಗುವ ರೀತಿಯಲ್ಲಿರುವ ವಿಡಿಯೋಗಳನ್ನು ತೆಗೆದು ಹಾಕುವಂತೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯವು ಆದೇಶ ನೀಡಿದೆ. ಹಲವು ವರ್ಷಗಳ ಹಿಂದೆಯೇ ಹತ್ಯೆಯಾಗಿರುವ ಸೌಜನ್ಯ ಪ್ರಕರಣದ ವಿಚಾರವಾಗಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಹಾಗೂ ಅವರ ಕುಟುಂಬದವರ ಕುರಿತು ಬಳ್ಳಾರಿ ಮೂಲದ ಯೂ ಟೂಬರ್‌ ಎಂ.ಡಿ.ಸಮೀರ್‌ ನಿರ್ಮಿಸಿದ್ದ ವಿಡಿಯೋಗಳು ಹಾಗೂ ಅವುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿರುವವರು ತೆಗೆದು ಹಾಕಬೇಕು ಎಂದು ನ್ಯಾಯಾಲಯದ ತೀರ್ಪಿನಲ್ಲಿ ತಿಳಿಸಲಾಗಿದೆ.

Published by HT Digital Content Services with permission from HT Kannada....