Bangalore, ಮಾರ್ಚ್ 18 -- Dhanveer Gowda: ಕನ್ನಡ ನಟ ಧನ್ವೀರ್‌ ಗೌಡ ದೇಹವನ್ನು ಇನ್ನಷ್ಟು ಹುರಿಗೊಳಿಸಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ನ ಸಿಕ್ಸ್‌ ಪ್ಯಾಕ್‌ ನಟರ ಸಾಲಿಗೆ ಸೇರಿದ್ದಾರೆ. ದುನಿಯಾ ವಿಜಯ್‌, ಚೇತನ್‌ ಸೇರಿದಂತೆ ಇನ್ನೂ ಹಲವು ನಟರು ಸಿಕ್ಸ್‌ ಪ್ಯಾಕ್‌ ಮಾಡಿಕೊಂಡಿದ್ದಾರೆ.

ಧನ್ವೀರ್‌ ಗೌಡ ನಟನೆಯ ವಾಮನ ಸಿನಿಮಾ ಇದೇ ಏಪ್ರಿಲ್‌ 10ರಂದು ಬಿಡುಗಡೆಯಾಗಲಿದೆ. ಇದೇ ಸಮಯದಲ್ಲಿ ನಟನ ಸಿಕ್ಸ್‌ ಪ್ಯಾಕ್‌ ಫೋಟೋಗಳು ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ. ಈ ಹಿಂದೆ ಕೈವಾ ಸಿನಿಮಾದಲ್ಲಿ ಧನ್ವೀರ್‌ ಮಿಂಚಿದ್ದರು.

ನಟ ಧನ್ವೀರ್‌ ಸ್ಯಾಂಡಲ್‌ವುಡ್‌ನಲ್ಲಿ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಇವರು ನಟಿಸಿದ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆದಿವೆ. ಕೈವಾ ಸಿನಿಮಾವಂತೂ ಬೆಂಗಳೂರಿನ ಕರಗ ಮತ್ತು ಪ್ರೇಮಕಥೆಯ ಮೂಲಕ ಪ್ರೇಕ್ಷಕರ ಹೃದಯ ತಟ್ಟಿತ್ತು. ಹಯಗ್ರಿವ, ಬಂಪರ್‌ ಇವರ ಇನ್ನಿತರ ಚಿತ್ರಗಳು.

ಶಂಕರ್ ರಾಮನ್ ನಿರ್ದೇಶನದ ವಾಮನ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಧನ್ವೀರ್‌ಗೆ ನಾಯಕ...