Bengaluru, ಫೆಬ್ರವರಿ 16 -- Dhananjay Wedding: ಸ್ಯಾಂಡಲ್‌ವುಡ್‌ ನಟ ಧನಂಜಯ್‌- ಧನ್ಯತಾ ಜೋಡಿ ಇಂದು (ಫೆ. 16) ಮೈಸೂರಿನ ವಸ್ತು ಸಂಗ್ರಹಾಲಯದ ಆವರಣದಲ್ಲಿ ಗ್ರ್ಯಾಂಡ್‌ ಆಗಿಯೇ ಮದುವೆಯಾಗಿದ್ದಾರೆ. ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಜತೆಗೆ ರಾಜಕೀಯ ಗಣ್ಯರು ಮತ್ತು ಮಠಾಧೀಶರು ಆಗಮಿಸಿ ನವ ಜೋಡಿಗೆ ಶುಭಕೋರಿದ್ದಾರೆ. ಮದುವೆ ಬಳಿಕ ಮಾಧ್ಯಮದ ಮುಂದೆ ಬಂದ ನವಜೋಡಿ ಧನಂಜಯ್‌ ಮತ್ತು ಧನ್ಯತಾ, ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಮದುವೆ ನಾವಂದುಕೊಂಡಿದ್ದಕ್ಕಿಂತ ಚನ್ನಾಗಿ ಆಗಿದೆ. ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದ ಧನಂಜಯ್‌, "ಕನ್ನಡ ಚಿತ್ರರಂಗ ನನ್ನ ಕುಟುಂಬವಿದ್ದ ಹಾಗೆ. ನನ್ನ ಪ್ರಾರಂಭದ ದಿನಗಳಿಂದಲೂ ನನ್ನ ಕೈ ಹಿಡಿದಿದ್ದಾರೆ. ಅವರ ಆಶೀರ್ವಾದ ನನ್ನ ಮೇಲೆ ಇದೆ. ನಾನು ಕೂಡ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ.

ಇದನ್ನೂ ಓದಿ: ಬಡವರ ಮಕ್ಕಳು ಶ್ರೀಮಂತರಂತೆ ಮದುವೆ ಆಗ್ಬಾರ್ದಾ? ಇದು ಹೆಮ್ಮೆಯಿಂದ ಕಾಲರ್‌ ಎತ್ತೋ ಟೈಮ್;‌ ವೀರಕಪುತ್ರ ಶ್ರೀನಿವಾಸ್‌ ಬರಹ

"ನಾವ...