ಭಾರತ, ಫೆಬ್ರವರಿ 16 -- Dhananjay Wedding: ನಟ ಧನಂಜಯ್‌ ಮತ್ತು ಧನ್ಯತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು (ಫೆ. 16) ಮೈಸೂರಿನಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಎರಡೂ ಕುಟುಂಬಗಳ ಹಿರಿಯರು, ಆಪ್ತರು, ಸಿನಿಮಾ ಬಳಗ, ರಾಜಕೀಯ ಗಣ್ಯರ ಸಮ್ಮುಖದಲ್ಲಿ ಧನ್ಯತಾ ಅವರನ್ನು ವರಿಸಿದ್ದಾರೆ ಧನಂಜಯ್.‌ ಚಾಮುಂಡೇಶ್ವರಿ ದೇವಸ್ಥಾನವನ್ನು ಹೋಲುವ ಸೆಟ್‌ ನಿರ್ಮಿಸಿ, ಬೃಹತ್‌ ಕಲ್ಯಾಣ ಮಂಟಪದಲ್ಲಿ ಗ್ರ್ಯಾಂಡ್‌ ಆಗಿಯೇ ಈ ಕಲ್ಯಾಣೋತ್ಸವ ನಡೆದಿದೆ. ಇದೀಗ ಇದೇ ಮದುವೆ ಬಗ್ಗೆಯೂ ಸೋಷಿಯಲ್‌ ಮೀಡಿಯಾದಲ್ಲಿ ಬಗೆಬಗೆ ರೀತಿಯಲ್ಲಿ ಕಾಮೆಂಟ್‌ ಹರಿದಾಡುತ್ತಿವೆ. ಬಡವರ ಮಕ್ಕಳು ಬೆಳಿಬೇಕು ಎಂದು, ಇಷ್ಟೊಂದು ಶ್ರೀಮಂತರಂತೆ ಮದುವೆ ಆಗುವುದು ಬೇಕಿತ್ತಾ ಎಂದೂ ಕೆಲವರು ಟೀಕೆ ಮಾಡುತ್ತಿದ್ದಾರೆ. ಇದೆಲ್ಲದರ ಬಗ್ಗೆ ಪುಸ್ತಕ ಪ್ರಕಾಶಕ, ವಿಷ್ಣುವರ್ಧನ್‌ ಅವರ ಕಟ್ಟಾ ಅಭಿಮಾನಿ ವೀರಕಪುತ್ರ ಶ್ರೀನಿವಾಸ್‌ ಸುದೀರ್ಘ ಬರಹವೊಂದನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಏರಿಯಾದಲ್ಲಿರುವ ವೀರಕಪುತ್ರ ಶ್ರೀನಿವಾಸ ಅವರು ನನಗೆ ಗೊತ್ತು ಅಂತ ನನ್ನ ಪರಿಚಯದ...