Bengaluru, ಮಾರ್ಚ್ 8 -- Darshan Devil Movie: ಎಲ್ಲ ಅಂದುಕೊಂಡಂತೆ ಆಗಿದ್ದರೆ, ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರ ದಿ ಡೆವಿಲ್‌ ಸಿನಿಮಾ ಕಳೆದ ವರ್ಷದ ಕೊನೆಗೆ ಬಿಡುಗಡೆ ಆಗಬೇಕಿತ್ತು. ಆದರೆ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಆರೇಳು ತಿಂಗಳು ಜೈಲಿನಲ್ಲಿಯೇ ಕಳೆಯಬೇಕಾಯಿತು. ಬೆನ್ನು ನೋವಿನ ಕಾರಣದಿಂದ, ಮಧ್ಯಂತರ ಜಾಮೀನು ಪಡೆದು, ಚಿಕಿತ್ಸೆಗೂ ಆಚೆ ಬಂದಿದ್ದರು. ಅದಾದ ಮೇಲೆ ಕೋರ್ಟ್‌ನಿಂದಲೂ ಜಾಮೀನು ಪಡೆದುಕೊಂಡು ನಿಟ್ಟುಸಿರು ಬಿಟ್ಟಿದ್ದರು ದರ್ಶನ್‌. ಇದೀಗ ಆರೋಗ್ಯದ ವಿಚಾರದಲ್ಲಿ ಕೊಂಚ ಚೇತರಿಸಿಕೊಂಡಿರುವ ಅವರು, ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಂದರೆ ಡೆವಿಲ್‌ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರೀ ಜೈ ಮಾತಾ ಕಂಬೈನ್ಸ್ ಬ್ಯಾನರ್‌ನಲ್ಲಿ ಗ್ರ್ಯಾಂಡ್‌ ಆಗಿಯೇ ನಿರ್ಮಾಣವಾಗುತ್ತಿದೆ ಡೆವಿಲ್‌ ಸಿನಿಮಾ. ಈ ಹಿಂದೆ ನಟ ದರ್ಶನ್‌ಗೆ ತಾರಕ್‌ ಸಿನಿಮಾ ನಿರ್ದೇಶನ ಮಾಡಿದ್ದ ಪ್ರಕಾಶ್ ವೀರ್, ಡೆವಿಲ್‌ ಚಿತ್ರಕ್ಕೂ, ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದ...