Bengaluru, ಫೆಬ್ರವರಿ 1 -- Deva box office collection day 1: ಬಾಲಿವುಡ್‌ ನಟ ಶಾಹೀದ್‌ ಕಪೂರ್‌ ನಟನೆಯ ದೇವ ಸಿನಿಮಾ ಶುಕ್ರವಾರ (ಜ. 31) ಬಿಡುಗಡೆ ಆಗಿದೆ. ಹೆಚ್ಚು ಹೈಪ್‌ ಇಲ್ಲದಿದ್ದರೂ, ಹಿಂದಿ ಭಾಷಿಕರ ಗಮನ ಸೆಳೆದಿತ್ತು ಈ ಸಿನಿಮಾ. ಆದರೆ, ಬಿಡುಗಡೆ ಆದ ಬಳಿಕ ಅದ್ಯಾಕೋ ಕೊಂಚ ಮಂಕಾಗಿದೆ. ವಿಮರ್ಶೆ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆ ಪಡೆದ ದೇವ, ಮೊದಲ ದಿನದ ಗಳಿಕೆಯಲ್ಲಿಯೂ ಹೇಳಿಕೊಳ್ಳುವ ಮೊತ್ತ ಕಲೆಹಾಕಿಲ್ಲ. ಇಷ್ಟಿದ್ದರೂ, ಈ ವರ್ಷ ಬಾಲಿವುಡ್‌ನಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಹಿಂದಿ ಸಿನಿಮಾಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗಾದರೆ ದೇವ ಚಿತ್ರದ ಮೊದಲ ದಿನದ ಕಲೆಕ್ಷನ್‌ ಎಷ್ಟು?

1.67 ಕೋಟಿ ರೂ. ಮುಂಗಡ ಬುಕಿಂಗ್‌ನೊಂದಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ದೇವ ಚಿತ್ರವು ಮೊದಲ ದಿನ ಕೋಟಿ ಲೆಕ್ಕದಲ್ಲಿ ಎರಡಂಕಿ ದಾಟಲು ವಿಫಲವಾಗಿದೆ. ಸಾಕ್ನಿಲ್ಕ್ (sacnilk) ವರದಿಯ ಪ್ರಕಾರ, ರೋಷನ್ ಆಂಡ್ರ್ಯೂಸ್ ನಿರ್ದೇಶನದ 'ದೇವ' ಚಿತ್ರ ದೇಶದಲ್ಲಿ 5 ಕೋಟಿ ರೂ. ಕಲೆಕ್...