ಭಾರತ, ಫೆಬ್ರವರಿ 5 -- ದಿನನಿತ್ಯ ನಮ್ಮ ಸುತ್ತಮುತ್ತಲ್ಲಿರುವ ಜನಗಳು 'ನನಗೆ ಡಿಪ್ರೆಶನ್ ಆಗಿದೆ', 'ನಾನು ಡಿಪ್ರೆಶನ್‌ನಲ್ಲಿದ್ದೆ' ಎಂದು ಹೇಳುವುದನ್ನು ಕೇಳುತ್ತಿರುತ್ತೇವೆ. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು, ಸಣ್ಣ ವಯಸ್ಸಿನ ಮಕ್ಕಳು ಸಹಿತ ಪದೇಪದೇ 'ಡಿಪ್ರೆಶನ್' ಎನ್ನುವ ಪದ ಬಳಕೆ ಮಾಡುವುದನ್ನು ಕೇಳುತ್ತಿದ್ದೇವೆ. ಹಾಗಾದರೆ ಇದು ನಿಜವೇ? ಇವರು ಡಿಪ್ರೆಶನ್‌ನಿಂದ ನರಳುತ್ತಿರುವುದು ನಿಜವೇ? ಏನಿದು 'ಡಿಪ್ರೆಶನ್'? ಇದರ ಲಕ್ಷಣಗಳೇನು? ಇದಕ್ಕೆ ಪರಿಹಾರವೇನು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ದಿನನಿತ್ಯ ಅಥವಾ ಒಮ್ಮೊಮ್ಮೆ ಆಗುವ ಸಣ್ಣಪುಟ್ಟ ಬೇಸರ, ನಿರಾಸೆ, ದುಃಖಗಳೆಲ್ಲವೂ ಖಿನ್ನತೆಯಾಗುವುದಿಲ್ಲ. ಸಾಮಾನ್ಯವಾಗಿ ಆಗುವ ಬೇಸರಗಳು ಸ್ವಲ್ಪ ಕಾಲದವರೆಗೆ ಮಾತ್ರವಿದ್ದು ಕ್ರಮೇಣ ಮಾಸಿ ಹೋಗುತ್ತದೆ. ಇದು ನಿಮ್ಮ ದಿನಚರಿ, ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ ಈ ಬೇಸರದ ಮನಸ್ಥಿತಿ ಆಳವಾಗಿ ಬೇರೂರಿ ದೀರ್ಘಕಾಲದವರೆಗೆ ನಿಮ್ಮನ್ನು ಆವರಿಸಿದರೆ ಖಿನ್ನತೆಯಾಗುವ ಸಾಧ್ಯತೆಯಿದೆ.

ಹಾಗಾಗಿ 'ಖ...