ಭಾರತ, ಮಾರ್ಚ್ 2 -- ಕ್ಷೇತ್ರ ಮರುವಿಂಗಡಣೆ (ಡೀಲಿಮಿಟೇಶನ್‌ -Delimitation) ಈಗ ಚರ್ಚೆಯ ವಿಷಯವಾಗಿದೆ. ಜನಸಂಖ್ಯೆ ಬದಲಾವಣೆಯ ಆಧಾರದ ಮೇಲೆ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಗಡಿಗಳ ಪುನರ್ವಿಂಗಡಣೆ ಮಾಡುವ ಡೀಲಿಮಿಟೇಶನ್‌ ವಿಷಯವೀಗ ತಮಿಳುನಾಡು ಮತ್ತು ದಕ್ಷಿಣ ಭಾರತದಾದ್ಯಂತ ಪ್ರಮುಖ ರಾಜಕೀಯ ವಿವಾದದ ಕೇಂದ್ರಬಿಂದುವಾಗಿದೆ. ದಿನದಿಂದ ದಿನಕ್ಕೆ ಈ ಚರ್ಚೆ ಹೆಚ್ಚಾಗುತ್ತಿದ್ದು, ದಕ್ಷಿಣ ಭಾರತದ ರಾಜ್ಯಗಳು ಪುನರ್ವಿಂಗಡಣೆಯ ಬಗ್ಗೆ ಹಿಂದೇಟು ಹಾಕುತ್ತಿವೆ. ಹಾಗಿದ್ದರೆ, ಇದರ ಹಿನ್ನೆಲೆಯೇನು, ಡೀಲಿಮಿಟೇಶನ್‌ನಿಂದ ಯಾರಿಗೆ ಲಾಭ, ಯಾರಿಗೆ ನಷ್ಟ? ಈ ಕುರಿತು‌ ಬರಹಗಾರ ಕೃಷ್ಣ ಭಟ್ ಅವರ ಲೇಖನ ಇಲ್ಲಿದೆ.

ಡೀಲಿಮಿಟೇಶನ್‌ ಗಲಾಟೆ ಜೋರಾಗಿದೆ. ದಕ್ಷಿಣದ ರಾಜ್ಯಗಳಿಗೆ ಸಂಸತ್ತಿನಲ್ಲಿ, ರಾಜಕೀಯದಲ್ಲಿ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎಂಬುದು ರಾಜಕಾರಣಿಗಳ ಹಾಗೂ ಪಕ್ಷಗಳ ಆಕ್ಷೇಪ. ಆದರೆ, ಜನಸಾಮಾನ್ಯರಿಗೆ ಇದರಿಂದ ಏನಾದರೂ ತೊಂದರೆ ಆದೀತೇ? ಖಂಡಿತ ಇಲ್ಲ. ಯಾಕೆ? ನೋಡೋಣ.

ಡೀಲಿಮಿಟೇಶನ್‌ ಇದೇ ಮೊದಲ ಬಾರಿಗೆ ಮಾಡುತ್ತಿರೋದಲ್ಲ....