Delhi, ಫೆಬ್ರವರಿ 16 -- Delhi Stampede: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿರುವ ಮಹಾ ಕುಂಭಮೇಳಕ್ಕೆ ಹೊರಡಲು ಶನಿವಾರ ರಾತ್ರಿ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಸೇರಿದ್ದ ಭಕ್ತರು ಅವಸರದಲ್ಲಿ ರೈಲು ಏರುವಾಗ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 18 ಜನ ಪ್ರಾಣ ಕಳೆದುಕೊಂಡಿದ್ಧಾರೆ. ಇದರಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಸೇರಿದ್ದಾರೆ. ಕಾಲ್ತುಳಿತದಲ್ಲಿ ಹಲವರು ಗಾಯಗೊಂಡಿದ್ದು ದೆಹಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಇನ್ನೂ ಕೆಲವರ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟವರ ಸಂಖ್ಯೆಯನ್ನು ರೈಲ್ವೆ ಇಲಾಖೆ ಇನ್ನಷ್ಟೇ ಅಧಿಕೃತವಾಗಿ ಪ್ರಕಟಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವರು ದುರ್ಘಟನೆಗೆ ಸಂತಾಪ ಸೂಚಿಸಿದ್ದಾರೆ. ವಿಳಂಬವಾಗಿ ರೈಲು ಆಗಮಿಸಿ ಫ್ಲಾಟ್‌ಫಾರಂ ಬದಲಿಸಿದ್ದರಿಂದ ಜನ ಅತ್ತ ಕಡೆ ನುಗ್ಗಿದಾಗ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಮಹಾ ಕುಂಭಮೇಳ ಈ ತಿಂಗಳ 26ಕ್ಕೆ ಕೊನೆಗೊಳ್ಳಲಿದ್ದು, ಈ ವಾರಾಂತ್ಯಕ್ಕೆ ಪ್ರಯಾಗ್‌ರಾಜ್‌ಗೆ ತೆರಳಲೆಂದು ದೆಹಲಿ ಹಾಗೂ ಸುತ್ತಮುತ...