Delhi, ಫೆಬ್ರವರಿ 7 -- ದೆಹಲಿ: ದೆಹಲಿ ವಿಧಾನಸಭೆಗೆ ಎರಡು ದಿನದ ಹಿಂದೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಫೆಬ್ರವರಿ 8 ರ ಶನಿವಾರ ಬೆಳಿಗ್ಗೆ ಶುರುವಾಗಲಿದ್ದು, ಮಧ್ಯಾಹ್ನದ ಹೊತ್ತಿಗೆ ನಿಚ್ಚಳ ಫಲಿತಾಂಶ ಹೊರ ಬೀಳಲಿದೆ. ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಇರಾದೆಯೊಂದಿಗೆ ಆಡಳಿತಾರೂಢ ಆಮ್‌ ಆದ್ಮಿ ಪಕ್ಷ ಚುನಾವಣೆ ಎದುರಿಸಿದೆ. ಅಲ್ಲದೇ ಮತ್ತೊಮ್ಮೆ ದೆಹಲಿ ಗದ್ದುಗೆ ಹಿಡಿಯುವ ಉಮೇದಿನಲ್ಲಿದೆ. ಮೋದಿ ನಾಮಬಲದ ಜತೆಗೆ ಆಮ್‌ ಆದ್ಮಿ ಪಕ್ಷದ ಆಡಳಿತ ವಿರೋಧಿ ಅಲೆಯನ್ನು ನೆಚ್ಚಿಕೊಂಡು ಬಿಜೆಪಿ ಹಿಂದಿನ ಗತ ವೈಭವಕ್ಕೆ ಮರಳುವ ವಿಶ್ವಾಸದಲ್ಲಿದೆ. ಈ ಎರಡು ಪಕ್ಷಗಳ ನಡುವೆ ಸ್ಪರ್ಧೆಗೆ ಇಳಿದಿರುವ ಹಿಂದೆ ಸತತವಾಗಿ ದೆಹಲಿ ಆಡಳಿತ ನಡೆಸಿರುವ ಕಾಂಗ್ರೆಸ್‌ ಕೂಡ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲಿದೆ.

ಮುಖ್ಯ ಚುನಾವಣಾಧಿಕಾರಿ ಆರ್. ಆಲಿಸ್ ವಾಜ್ ದೃಢಪಡಿಸಿದ ಪ್ರಕಾರ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) 70 ಸ್ಟ್ರಾಂಗ್ ರೂಮ್‌ಗಳಲ್ಲಿ ಇರಿಸಲಾಗಿದ್ದು, ಪ್ರತಿಯೊಂದನ್ನು ಒಂದು ವಿಧಾನಸಭಾ ಕ...