Delhi, ಫೆಬ್ರವರಿ 21 -- Delhi CM: ನನ್ನ ಕಚೇರಿ ಈಗ ಎಲ್ಲರಿಗೂ ತೆರೆದಿರಲಿದೆ. ದೆಹಲಿಗೆ ಸಂಬಂಧಿಸಿದಂತೆ ಏನೇ ಸಮಸ್ಯೆ, ವಿಚಾರವಿದ್ದರೂ ನನ್ನ ಬಳಿ ಮಾತನಾಡಲು ಅವಕಾಶವಿದೆ. ಈ ಹಿಂದೆ ಮುಖ್ಯಮಂತ್ರಿ ಕಚೇರಿ ಪ್ರವೇಶಕ್ಕೆ ಪರಿಸ್ಥಿತಿ ಹೇಗಿತ್ತು ಎನ್ನುವುದು ಹೇಳಬೇಕಿಲ್ಲ. ಇನ್ನು ಮುಂದೆ ಹೀಗೆ ಆಗುವುದಿಲ್ಲ. ದೆಹಲಿ ಸಿಎಂ ಕಚೇರಿಗೆ ನೀವು ಭೇಟಿ ನೀಡಬಹುದು ಎಂದು ಪ್ರತೀ ನಾಗರೀಕರಿಗೂ ಹೇಳುತ್ತಿದ್ದೇನೆ. ಈಗ ಸಿಎಂ ಕಚೇರಿಯ ಬಾಗಿಲುಗಳು ಎಲ್ಲರಿಗೂ ತೆರೆದಿವೆ. ಇದು ದೆಹಲಿಯ ನೂತನ ಸಿಎಂ ರೇಖಾ ಗುಪ್ತ ಅವರು ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಪ್ರತಿಕ್ರಿಯೆ.

ದೆಹಲಿಯ ಒಂಬತ್ತನೇ ಮುಖ್ಯಮಂತ್ರಿಯಾಗಿ ಮತ್ತು ಉನ್ನತ ಹುದ್ದೆಯನ್ನು ಅಲಂಕರಿಸಿದ ನಾಲ್ಕನೇ ಮಹಿಳೆಯಾಗಿ ರಾಮ್ ಲೀಲಾ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಂತರ, ರೇಖಾ ಗುಪ್ತಾ ಅವರು ದೆಹಲಿ ಸಚಿವಾಲಯದ ತಮ್ಮ ಕಚೇರಿಯಲ್ಲಿ ಸರ್ಕಾರದ ಆದ್ಯತೆಗಳು, ಚುನಾವಣೆಗೆ ಮುಂಚಿತವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೀಡಿದ ಪ್ರಮುಖ ಭರವಸೆಗಳ ಬಗ್ಗೆ ಹಿ...