Bangalore, ಜನವರಿ 28 -- ಬೆಂಗಳೂರು: ಚೀನಾದ ಎಐ ಕಂಪನಿಯೊಂದರ ಪ್ರಾಬಲ್ಯಕ್ಕೆ ಅಮೆರಿಕದ ಷೇರುಪೇಟೆ ಬೆಚ್ಚಿ ಬಿದ್ದಿದೆ. ಅಮೆರಿಕದಲ್ಲಿ ಹೆಚ್ಚು ಜನರು ಡೌನ್‌ಲೋಡ್‌ ಮಾಡಿದ ಎಐ ಅಪ್ಲಿಕೇಷನ್‌ಗಳಲ್ಲಿ ಚೀನಾದ ಎಐ ಕಂಪನಿ ಡೀಪ್‌ಸೀಕ್‌ ಇದೀಗ ಉಚಿತ ಚಾಟ್‌ಜಿಪಿಟಿ ಅನ್ನು ಹಿಂದಿಕ್ಕಿದೆ. ಇದರಿಂದ ಅಮೆರಿಕದ ಷೇರುಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಿದೆ. ವಿಶೇಷವಾಗಿ ಎನ್‌ವಿಡಿಯಾ ಷೇರುಗಳು ಶೇಕಡ 17ರಷ್ಟು ಕುಸಿದಿದೆ.

40 ವರ್ಷದ ಲಿಯಾಂಗ್ ಒಬ್ಬ ಚೀನೀ ಉದ್ಯಮಿ. 2015ರಲ್ಲಿ ಝೆಜಿಯಾಂಗ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಬಳಿಕ ಕ್ವಾಂಟಿಟೇಟಿವ್‌ ಹೆಡ್ಜ್‌ ಫಂಡ್‌, ಹೈಫ್ಲೈಯರ್‌ ಫಂಡ್‌ ಸಹಸ್ಥಾಪಕರಾದರು. ಹೈಫ್ಲೈಯರ್‌ನಲ್ಲಿ ಷೇರುಪೇಟೆಯ ಮಾರುಕಟ್ಟೆಯ ಟ್ರೆಂಡಿಂಗ್‌ ಊಹಿಸಲು ಮತ್ತು ಷೇರು ಹೂಡಿಕೆಗೆ ಸಹಾಯ ಮಾಡಲು ಎಐ ಬಳಸಿದರು.

2021ರಲ್ಲಿ ಜೋ ಬಿಡೆನ್ ನೇತೃತ್ವದ ಅಮೆರಿಕ ಸರ್ಕಾರವು ಚೀನಾಕ್ಕೆ ಎಐ ಚಿಪ್‌ಗಳ ಯುಎಸ್ ರಫ್ತುಗಳನ್ನು ನಿರ್ಬಂಧಿಸಿತ್ತು. ಅದಕ್ಕೂ ಮೊದಲೇ ಸಾವಿರಾರು ಎನ್‌ವಿಡಿಯಾ ಗ್ರಾಫಿಕ್ಸ್ ಪ್ರೊಸೆಸರ್‌ಗಳನ್ನು ಎಐ ಸೈಡ...